Home ಜಿಲ್ಲೆ ಮಕ್ಕಳು ಬಾಲಕಾರ್ಮಿಕರಾಗದೆ ಅಗತ್ಯ ಶಿಕ್ಷಣ ಪಡೆಯಿರಿ

ಮಕ್ಕಳು ಬಾಲಕಾರ್ಮಿಕರಾಗದೆ ಅಗತ್ಯ ಶಿಕ್ಷಣ ಪಡೆಯಿರಿ

ನವಲಗುಂದ,ಜೂ೨೩ : ಹದಿನಾಲ್ಕು ವರ್ಷ ಒಳಗಿನ ಮಕ್ಕಳನ್ನು ಹೋಟೆಲ್ ಗ್ಯಾರೇಜ್ ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವುದು ಕಾನೂನು ಬಾಹಿರ ಮಕ್ಕಳು ಬಾಲಕಾರ್ಮಿಕರಾಗದೆ ಅಗತ್ಯ ಶಿಕ್ಷಣವನ್ನು ಪಡೆಯಿರಿ ಎಂದು ನವಲಗುಂದ ನಾಗಲಿಂಗ ಸ್ವಾಮಿಮಠದ ವೀರೇಂದ್ರ ಸ್ವಾಮೀಜಿ ನುಡಿದರು

ಸ್ಥಳೀಯ ಶ್ರೀ ಅಜಾತ ನಾಗಲಿಂಗಸ್ವಾಮಿ ವಿದ್ಯಾಪೀಠದಲ್ಲಿ ವಿಶ್ವ ಬಾಲಕಾರ್ಮಿಕರ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಆಶೀರ್ವದಿಸಿದರು

ಉಪ ತಹಶೀಲ್ದಾರ್ ಗಣೇಶ ಚಳ್ಳಕೆರೆ , ನಾಗರಾಜ ಕರಿಸಕ್ರಣ್ಣವರ, ಭಾಗಿರತಿ ಮಳಲಿ, ನ್ಯಾಯವಾದಿ ಸಿ.ಎಂ. ಪಾಟೀಲ. ಬಸವರಾಜ ಪಂಚಾಕ್ಷರಿಮಠ ಶಾಲೆ ಪ್ರಧಾನಗುರು ಎಲ್ ಎಚ್ ಕಮ್ಮಾರ ಇತರರು ವೇದಿಕೆಯಲ್ಲಿದ್ದರು.