
ಕಲಬುರಗಿ,ಜು.25-ಮನೆ ಬಾಗಿಲಿನ ಕೊಂಡಿ ಮುರಿದು ಬಂಗಾರ, ಬೆಳ್ಳಿ, ನಗದು ಮತ್ತು ಬೈಕ್ ಸೇರಿ 7.87 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬಿದ್ದಾಪುರ ಕಾಲೋನಿಯಲ್ಲಿ ನಡೆದಿದೆ.
ಚಂದಮ್ಮಾ ಅಲಿಯಾಸ್ ಚಂದ್ರಕಲಾ ಯೋಹಾನ್ ರೆವಣುರ ಎಂಬುವವರ ಮನೆ ಬಾಗಿಲಿನ ಕೊಂಡಿ ಮುರಿದು ಕಳ್ಳರು 2.10 ಲಕ್ಷ ರೂ.ಮೌಲ್ಯದ 55 ಗ್ರಾಂ.ನ ತಾಳಿ ಚೈನ್, 80 ಸಾವಿರ ರೂ.ಮೌಲ್ಯದ 20 ಗ್ರಾಂ.ನ 2 ಎಳೆ ಸರ, 92 ಸಾವಿರ ರೂ.ಮೌಲ್ಯದ 23 ಗ್ರಾಂ.ನ ಲಾಕೆಟ್, 40 ಸಾವಿರ ರೂ.ಮೌಲ್ಯದ 10 ಗ್ರಾಂ.ನ ಸುತ್ತುಂಗುರ, 80 ಸಾವಿರ ರೂ.ಮೌಲ್ಯದ ತಲಾ 5 ಗ್ರಾಂ.ನ 4 ಸುತ್ತುಂಗುರ, 16 ಸಾವಿರ ರೂ.ಮೌಲ್ಯದ 4 ಗ್ರಾಂ.ನ ಕಿವಿಯೋಲೆ, 20 ಸಾವಿರ ರೂ.ಮೌಲ್ಯದ 5 ಗ್ರಾಂ.ನ ಕಿವಿಯೋಲೆ, 12 ಸಾವಿರ ರೂ.ಮೌಲ್ಯದ 3 ಗ್ರಾಂ.ನ ಕಿವಿಯೋಲೆ, 10 ಸಾವಿರ ರೂ.ಮೌಲ್ಯದ 2.5 ಗ್ರಾಂ.ನ ಕಿವಿಯೋಲೆ, 97 ಸಾವಿರ ರೂ.ನಗದು, ಬೆಳ್ಳಿಯ ಸಮಯ, ಸುತ್ತುಂಗುರ, ಉಡದಾರ, ಕಾಲಚೈನ, ಹಾಲಗಡಗಾ ಸೇರಿ 1 ಲಕ್ಷ ರೂ.ಮೌಲ್ಯದ 500 ಗ್ರಾಂ.ನ ಬೆಳ್ಳಿ ಸಾಮಾನು, 30 ಸಾವಿರ ರೂ.ಮೌಲ್ಯದ ಬೈಕ್ ಸೇರಿ 7.87 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಇವರು ಕರೆಂಟ್ ಹೋಗಿದ್ದರಿಂದ ಮತ್ತು ಧಗೆಯ ಕಾರಣಕ್ಕೆ ಮನೆಗೆ ಬೀಗ ಹಾಕಿಕೊಂಡು ಮನೆ ಮಾಳಿಗೆ ಮೇಲೆ ಮಲಗಿದ್ದಾಗ ಕಳ್ಳರು ಮನೆ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.































