
ಹಾವೇರಿ, ನ.೨೬: ಸಿನಿಮಾಗಳಲ್ಲಿ ಚಿತ್ರೀಕರಣಕ್ಕಾಗಿ ಬಳಸುವ ನಕಲಿ ನೋಟುಗಳನ್ನೇ ಅಸಲಿ ಹಣದಂತೆ ಚಲಾವಣೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.
ಬಂಧಿತರನ್ನು ರಾಣೇಬೆನ್ನೂರು ತಾಲೂಕಿನ ಮೇಡ್ಲೇರಿ ಗ್ರಾಮದ ಸುರೇಶ್ ಬಿಲ್ಲಾಳ್ ಮತ್ತು ಮಾಲತೇಶ್ ಮೈಲಾರ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ?೫೦೦ ಮುಖಬೆಲೆಯ ಬರೋಬ್ಬರಿ ೧,೦೦೦ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ನೋಟುಗಳನ್ನು ಎಲ್ಲಿಂದ ತರಲಾಗಿತ್ತು ಮತ್ತು ಇವುಗಳನ್ನು ಬೇರೆಡೆಗಳಲ್ಲಿಯೂ ಚಲಾವಣೆ ಮಾಡಲು ಯತ್ನಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಆರೋಪಿಗಳು ಬ್ಯಾಂಕ್ ಎಟಿಎಂನ ನಗದು ಜಮೆ ಯಂತ್ರಕ್ಕೆ ನಕಲಿ ?೫೦೦ ಮುಖಬೆಲೆಯ ನೋಟುಗಳನ್ನು ಹಾಕಲು ಯತ್ನಿಸಿದ್ದು, ಎಟಿಎಂನ ತಾಂತ್ರಿಕ ವ್ಯವಸ್ಥೆಯಿಂದಾಗಿ ವಂಚನೆ ಪ್ರಯತ್ನ ಬಯಲಾಗಿದೆ.
ಣೇಬೆನ್ನೂರು ಪಟ್ಟಣದ ರಾಷ್ಟ್ರೀಯ ಬ್ಯಾಂಕ್ವೊಂದರ ಎಟಿಎಂನಲ್ಲಿ ಆರೋಪಿಗಳು ?೫೦೦ ಮುಖಬೆಲೆಯ ೭೬ ನಕಲಿ ನೋಟುಗಳನ್ನು ಜಮೆ ಮಾಡಲು ಪ್ರಯತ್ನಿಸಿದ್ದರು.




















