
ಸಂವಿಧಾನ ದಿನಾಚರಣೆ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಜಿ.ಬಿ.ಎ. ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ ಪುತ್ಥಳಿಗೆ ವಿಶೇಷ ಆಯುಕ್ತರಾದ ನಿತೀಶ್ ಹಾಗೂ ಲಕ್ಷ್ಮೀಪ್ರಿಯರವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಉಪ ಆಯುಕ್ತರಾದ ರವೀಂದ್ರ, ಸಹಾಯಕ ಆಯುಕ್ತ ಗಿರೀಶ್ ನಂದನ್, ಉಪ ಆಯುಕ್ತೆ ಲಕ್ಷ್ಮಿದೇವಿ ಮತ್ತಿತರರು ಇದ್ದಾರೆ.

















