Home ಜಿಲ್ಲೆ ಬರ ಪೀಡಿತ ತಾಲೂಕಗಳಿಂದ ಭಾಲ್ಕಿ ತಾಲೂಕು ಕೈಬಿಟ್ಟಿದ್ದೇಕೆ? ಉಸ್ತುವಾರಿ ಸಚಿವರು ಉತ್ತರಿಸಲಿ : ವೀರಣ್ಣಾ ಕಾರಬಾರಿ

ಬರ ಪೀಡಿತ ತಾಲೂಕಗಳಿಂದ ಭಾಲ್ಕಿ ತಾಲೂಕು ಕೈಬಿಟ್ಟಿದ್ದೇಕೆ? ಉಸ್ತುವಾರಿ ಸಚಿವರು ಉತ್ತರಿಸಲಿ : ವೀರಣ್ಣಾ ಕಾರಬಾರಿ

ಭಾಲ್ಕಿ :ಬರ ಪೀಡಿತ ತಾಲೂಕಗಳೆಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರದ ಪಟ್ಟಿಯಲ್ಲಿ ಭಾಲ್ಕಿ ತಾಲೂಕವನ್ನು ಕೈ ಬಿಡಲಾಗಿದೆ, ಇದಕ್ಕೆ ಕಾರಣ ಏನು ಎಂಬುವದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ರವರು ಉತ್ತರನೀಡಬೇಕು. ಯಾಕೆಂದರೆ ಎಲ್ಲರಿಗೂ ತಿಳಿದಿರುವ ಹಾಗೆ ತಾಲೂಕಿನಲ್ಲಿ ಮಳೆಯ ಅಭಾವದಿಂದ ಬೆಳೆಗಳು ಒಣಗಿ ಹೋಗಿರುತ್ತಿರುವುರಿಂದ ರೈತರು ಸಂಕಷ್ಟದಲ್ಲಿದ್ದಾರೆ, ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಮೌನ ವಹಿಸಿರುವದು ನೋಡಿದರೆ, ಅವರ ಪ್ರಕಾರ ತಾಲೂಕಿನಲ್ಲಿ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿದೆ, ರೈತರು ಸಂತೋಷದಲ್ಲಿದ್ದಾರೆ ಎಂದರ್ಥನಾ ? ಈ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಬೇಕು.
ಜೂನ್ ತಿಂಗಳಲ್ಲಿ ಅಲ್ಪ ಸ್ವಲ್ಪ ಮಳೆ ಬಿದ್ದಾಗ ಮುಂದೆ ಮಳೆ ಬರಬಹುದು ಎಂದು ಕೆಲವು ರೈತರು ಬಿತ್ತನೆ ಮಾಡಿರುತ್ತಾರೆ, ಆದರೆ ಮಳೆಯ ಅಭಾವದಿಂದ ಬೆಳೆಗಳು ಒಣಗಿಹೋಗಿರುತ್ತವೆ, ಜುಲೈ ತಿಂಗಳ ಕೊನೆಯಲ್ಲಿ ಮತ್ತೆ ಸ್ವಲ್ಪ ಮಳೆ ಬಂದಾಗ ಮೊದಲು ಬಿತ್ತನೆ ಮಾಡಿದ ಕೆಲ ರೈತರು ಮರು ಬಿತ್ತನೆ ಮಾಡಿರುತ್ತಾರೆ, ಕೆಲವರು ಬಿತ್ತನೆ ಮಾಡದೆ ಹಾಗೆ ಬಿಟ್ಟಿರುತ್ತಾರೆ, ಇನ್ನು ಕೆಲವರು ಜುಲೈ ತಿಂಗಳಿನಲ್ಲಿ ಮೊದಲನೇ ಸಲ ಬಿತ್ತನೆ ಮಾಡಿರುತ್ತಾರೆ. ಆದರೆ ಮಳೆಯ ಅಭಾವದಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿ ಒಣಗಿಹೋಗುವ ಸ್ಥಿತಿಯಲ್ಲಿವೆ, ಈ ಸಂಬAಧ ಭಾರತೀಯ ಜನತಾ ಪಾರ್ಟಿ ಭಾಲ್ಕಿ ಮಂಡಲದ ವತಿಯಿಂದ ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆಯವರ ನೇತೃತ್ವದಲ್ಲಿ ಕಳೆದ ತಿಂಗಳು ರೈತರ ಜಮೀನು ಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ಮಾಡಿ, ವಸ್ತು ಸ್ಥಿತಿ ಅವಲೋಕನೆ ಮಾಡಿ ಭಾಲ್ಕಿ ತಾಲೂಕವನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು, ಮತ್ತು ರೈತರಿಗೆ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ೨ ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡಬೇಕು, ಮತ್ತು ಪ್ರತಿ ಎಕರೆಗೆ ೫೦ ಸಾವಿರ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗಿತ್ತು, ಯಾಕೆಂದರೆ ರೈತ ಜಮೀನುಗಳ ಉಳುಮೆಗೆ, ಮಾಡಿರುವ ಖರ್ಚು, ಬಿತ್ತನೆಯ ಖರ್ಚು, ಬೀಜ, ಗೊಬ್ಬರ, ಮತ್ತು ಔಷಧೀಯ ಖರ್ಚು, ಕಳೆ ತೆಗೆಯುವ ಖರ್ಚು ಹೀಗೆ ಎಕರೆಗೆ ಕನಿಷ್ಠ ೨೫ ಸಾವಿರ ಖರ್ಚು ಮಾಡಿ, ಬೇಳೆ ಬರಬಹುದು ಎಂಬ ಆಶಾ ಭಾವನೆಯೊಂದಿಗೆ ಸಾಲ ಸುಲ ಮಾಡಿ, ಯಾವುದೇ ಸಂಬಳವಿಲ್ಲದೆ ವರ್ಷಗಟ್ಟಲೆ ಜಮೀನಿನಲ್ಲಿ ದುಡಿಯುತ್ತಾನೆ, ಆದರೆ ಬೆಳೆ ಬಾರದೆ ಇದ್ದಾಗ ಸಾಲದ ಸುಳಿಯಲ್ಲಿ ಸಿಲುಕಿ ಸಂಕಷ್ಠ ಅನುಭವಿಸುತ್ತಾನೆ. ಮಳೆ ಬಿಸಿಲು ಎನ್ನದೇ ಸರ್ವರಿಗೂ ಅನ್ನವ ನೀಡುವ ರೈತನ ನೆರವಿಗೆ ಬರಬೇಕಾದ ರಾಜ್ಯ ಸರ್ಕಾರ ಭಾಲ್ಕಿ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದೆ, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಮತ್ತು ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಈ ಕೂಡಲೇ ಭಾಲ್ಕಿ ತಾಲೂಕಾವನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು ಇಲ್ಲದಿದ್ದಲ್ಲಿ ಭಾರತೀಯ ಜನತಾ ಪಾರ್ಟಿ, ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವದು, ಮತ್ತು ಸಂಕಷ್ಠ ದಲ್ಲಿರುವ ರೈತರಿಗೆ ಪ್ರತಿ ಎಕರೆಗೆ ೫೦ ಸಾವಿರ ರೂಪಾಯಿ ಪರಿಹಾರ ನೀಡಬೇಕು, ಹಾಗು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.