Home ಜಿಲ್ಲೆ ಕಲಬುರಗಿ ಯಾಜ್ಞವಲ್ಕ್ಯ ಭವನದಲ್ಲಿ ಉಪಾಕರ್ಮ: ಯಜ್ಞೋಪವೀತ ಧಾರಣೆ

ಯಾಜ್ಞವಲ್ಕ್ಯ ಭವನದಲ್ಲಿ ಉಪಾಕರ್ಮ: ಯಜ್ಞೋಪವೀತ ಧಾರಣೆ

ಕಲಬುರಗಿ, ಆ. 28: ನಗರದ ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಯಾಜ್ಞವಲ್ಕ್ಯ ಭವನದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿ ಆಶ್ರಯದಲ್ಲಿ ಶುಕ್ಲಯಜುರ್ವೇದೀಯರ ಉಪಾಕರ್ಮವನ್ನು ಇಂದು ಬೆಳಿಗ್ಗೆ ಶ್ರಾವಣ ಪೂರ್ಣಿಮೆಯ ಪಾವನ ಸಂದರ್ಭದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ವೇದಮೂರ್ತಿಗಳಾದ ಹರೀಶಾಚಾರ್ಯ ಹಾಗೂ ಶ್ರೀರಾಮಾಚಾರ್ಯ ಅವರ ಪೌರೋಹಿತ್ಯದಲ್ಲಿ ಗುರುಪರಂಪರೆಯ ಸ್ಮರಣೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನವಕಾಂಡ ಋಷಿ ಪೂಜೆ, ಗಣಪತಿ ಪೂಜೆ, ಮೃತ್ತಿಕಾಗೋಮಯ ಸ್ನಾನ, ಸಮಿಧಾದಾನ, ಗಾಯತ್ರಿ ಮಂತ್ರದಿಂದ ತಿಲಹೋಮ ಹಾಗೂ ಉತ್ಸರ್ಜನ ಉಪಾಕರ್ಮ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.
ವೇದಮಂತ್ರಗಳ ಘೋಷದೊಂದಿಗೆ ಸಾಮೂಹಿಕ ಯಜ್ಞೋಪವೀತ ಧಾರಣೆ ಹಾಗೂ ಉಪಾಕಮಾರ್ಂಗ ಹೋಮ ನೆರವೇರಿಸಿ, ವೇದಾಧ್ಯಯನದ ಪುನರಾರಂಭದ ಸಂಕಲ್ಪ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಋಷಿ-ಗುರುಪರಂಪರೆಯ ಸ್ಮರಣೆ ಹಾಗೂ ವೈದಿಕ ಸಂಸ್ಕøತಿಯ ಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿ, ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ, ಕಾರ್ಯದರ್ಶಿ ರಾಘವೇಂದ್ರ ವಕೀಲ ಸೇರಿದಂತೆ ಅಶೋಕ್ ಮಳ್ಳಿ, ಭೀಮಸೇನರಾವ ಸಿಂದಗೇರಿ, ಡಾ.ಉಡುಪಿ ಕೃಷ್ಣ ಜೋಶಿ, ವೆಂಕಟೇಶ ಕುಲಕರ್ಣಿ, ಸುಧೀರ ಕುಲಕರ್ಣಿ, ಭೀಮರಾವ್ ಕುಲಕರ್ಣಿ, ವಿನುತ ಜೋಶಿ, ಶಾಮರಾವ್ ಕುಲಕರ್ಣಿ, ವಾಸುದೇವರಾವ್ ಕುಳಗೇರಿ, ಪ್ರಶಾಂತ ದೀಕ್ಷಿತ್, ದತ್ತಾತ್ರೇಯ ಸಬ್ನವಿಸ್, ಶ್ರೀಧರ ಕುಲಕರ್ಣಿ, ಪ್ರಾಣೇಶಾಚಾರ್ಯ ಬೈಚಬಾಳ, ಜಯಚಾರ್ಯ, ಮಾತಾರ್ಂಡ ಹೇಮನೂರು, ಪ್ರಮೋದ್ ಕುಲಕರ್ಣಿ, ಅಶ್ವತ್ ಜೋಶಿ, ಸತ್ಯನಾರಾಯಣ ಕುಲಕರ್ಣಿ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು, ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.ವೈದಿಕ ಪರಂಪರೆಯ ಸಂರಕ್ಷಣೆ, ವೇದಾಧ್ಯಯನದ ಪುನರ್‍ಸಂಕಲ್ಪ ಹಾಗೂ ಋಷಿಗುರು ಪರಂಪರೆಗೆ ಗೌರವ ಸಲ್ಲಿಸುವ ಮೂಲಕ ಉಪಾಕರ್ಮ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿತು.