Home ಜಿಲ್ಲೆ ಕಲಬುರಗಿ ಸೆ.1 ರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಜನಾಂದೋಲನ :ತೆಲ್ಕೂರ್

ಸೆ.1 ರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಜನಾಂದೋಲನ :ತೆಲ್ಕೂರ್

ಕಲಬುರಗಿ, ಆ.28: ಕಾಂಗ್ರೆಸ್ ಸರ್ಕಾರ 2023 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ ದ್ರೋಹ ಬಗೆದಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರಕಾರದ ಎಲ್ಲಾ ವೈಫಲ್ಯಗಳ ವಿರುದ್ಧ ಸೆ.1 ರಾಯಚೂರಿನಿಂದ ಸೆ.10 ಬಳ್ಳಾರಿ ವರೆಗೆ 200 ಕಿ.ಮೀ ಬೃಹತ್ ಪಾದಯಾತ್ರೆ ನಡೆಸಿ ಜನಾಂದೋಲನ ರೂಪಿಸಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅವರ 2047 ‘ವಿಕಸಿತ ಭಾರತ’ದ ಸ್ಪಷ್ಟ ದೂರದೃಷ್ಟಿ ಒಂದೆಡೆ ಇದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಅಭಿವೃದ್ಧಿ ದೃಷ್ಟಿ ಇಲ್ಲದೆ ಕೇವಲ ಸಿಎಂ ಕುರ್ಚಿ ಕಾದಾಟ, ಸಂಪುಟಕ್ಕಾಗಿ ಕಿತ್ತಾಟದಲ್ಲೇ ವ್ಯಸ್ತವಾಗಿದೆ ಎಂದು ದೂರಿದರು.
ವಾಲ್ಮೀಕಿ ನಿಗಮದ ಮಹಾ ಲೂಟಿ:
ವಾಲ್ಮೀಕಿ ನಿಗಮದ ರೂ 187 ಕೋಟಿಯನ್ನು 600 ನಕಲಿ ಖಾತೆ ಹಾಗೂ ಶೆಲ್ ಕಂಪನಿ ಮೂಲಕ ದರೋಡೆ ಮಾಡಲಾಗಿದೆ. ಈ ಅಕ್ರಮ ತಾಳಲಾರದೆ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡು ಸಚಿವರ ಸೂಚನೆಯಂತೆ ಲೂಟಿ ನಡೆದಿದೆ ಎಂದು ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಇಡಿ ,ಸಿಬಿಐ ಸಚಿವ ಬಿ.ನಾಗೇಂದ್ರ ಅವರನ್ನೇ ಕಿಂಗ್‍ಪಿನ್ ಎಂದು ಹೇಳಿದೆ. ಈ ಹಣದಲ್ಲಿ ರೂ 20.19 ಕೋಟಿಯನ್ನು ಕಾಂಗ್ರೆಸ್ ತೆಲಂಗಾಣ ಹಾಗೂ ಬಳ್ಳಾರಿ ಚುನಾವಣೆಗೆ, ಐಷಾರಾಮಿ ಕಾರು, ನಗದು, ಬಂಗಾರಕ್ಕೆ ಬಳಸಿದೆ. ಇಷ್ಟಿದ್ದರೂ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿ ಭ್ರಷ್ಟರನ್ನು ರಕ್ಷಿಸಲಾಗಿದೆ. ಈ ಹಣವೇ ರಾಹುಲ್ ಗಾಂಧಿ ಮನೆಗೆ ಹೋಗಿದೆ ಎಂದು ಸದನದಲ್ಲಿ ನಮ್ಮ ನಾಯಕರು ಘೋಷಣೆ ಕೂಗಿದ ತಕ್ಷಣ ಡಿಕೆಶಿ ಸದನ ಮೊಟಕುಗೊಳಿಸಿದ್ದಾರೆ.
ದಲಿತ ವಿರೋಧಿ ಸರ್ಕಾರ:
ಬಿಜೆಪಿ ಸರ್ಕಾರ ಎಸ್ ಸಿ ಮೀಸಲಾತಿ 17% ಗೆ, ಎಸ್ ಟಿ 7% ಗೆ ಹೆಚ್ಚಿಸಿತ್ತು. ಕಾಂಗ್ರೆಸ್ ಅದನ್ನು 15% ಮತ್ತು 3% ಗೆ ಇಳಿಸಿ ದ್ರೋಹ ಎಸಗಿದೆ. ದಲಿತರ ಎಸ್ ಸಿ ಎಸ್ ಪಿ /ಟಿ ಎಸ್ ಪಿ ಕಲ್ಯಾಣ ನಿಧಿಯಿಂದ 53,926.46 ಕೋಟಿ (2023-24 ರಲ್ಲಿ 11,144 ಕೋ, 24-25 ರಲ್ಲಿ ?14,283 ಕೋ, 25-26 ರಲ್ಲಿ 13,433 ಕೋ, 26-27 ರಲ್ಲಿ 15,066 ಕೋ) ಗ್ಯಾರಂಟಿಗೆ ಮರುಹಂಚಿಕೆ ಮಾಡಿ ದಲಿತರ ಅಭಿವೃದ್ಧಿಗೆ ಕಲ್ಲು ಹಾಕಿದೆ. ದಲಿತ ವಿದ್ಯಾರ್ಥಿಗಳ ‘ಪ್ರಬುದ್ಧ’ ವಿದೇಶಿ ಶಿಷ್ಯವೇತನ ಯೋಜನೆ ರದ್ದು ಮಾಡಿದೆ.
ಮಹಿಳಾ ವಿರೋಧಿ: ರೂ 5,000 ಕೋಟಿ 2 ತಿಂಗಳ ಗೃಹಲಕ್ಷ್ಮಿ ಬಾಕಿ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಧಾನಸಭೆಯಲ್ಲೇ ಸುಳ್ಳು ಹೇಳಿದ್ದಾರೆ. ಅಂಉ ವರದಿ ಪ್ರಕಾರ ನಕಲಿ ಖಾತೆಗಳಿಗೆ ಕೋಟಿಗಟ್ಟಲೆ ಹಣ ವರ್ಗಾವಣೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಗೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ಬಾಣಂತಿಯರು ಸಾವು, ಗೃಹ ಸಚಿವ ಪರಮೇಶ್ವರ್ “ದೊಡ್ಡ ನಗರದಲ್ಲಿ ಸಾಮಾನ್ಯ” ಎಂದು ಹೇಳಿ ಅವಮಾನ ಮಾಡಿದ್ದಾರೆ.
ಕೆ ಪಿ ಎಸ್ ಸಿ ಹಳ್ಳ – ಯುವಕರಿಗೆ ದ್ರೋಹ: 2 ಲಕ್ಷ ಸರ್ಕಾರಿ ಹುದ್ದೆ ಖಾಲಿ. ಏಂS ಪರೀಕ್ಷೆಯಲ್ಲಿ ಅನುವಾದ ದೋಷ, ಕೈಗಾರಿಕಾ ವಿಸ್ತರಣಾಧಿಕಾರಿ ನೇಮಕಾತಿಯಲ್ಲಿ ಅಧ್ಯಕ್ಷರ ಕುಟುಂಬದವರಿಗೇ ಅಕ್ರಮ ಆಯ್ಕೆ. ಪಶುವೈದ್ಯಾಧಿಕಾರಿ ನೇಮಕದಲ್ಲಿ 80 ಲಕ್ಷ ಲಂಚ, ಪ್ರಶ್ನೆಪತ್ರಿಕೆ ಸೋರಿಕೆ, ಒಎಂ ಆರ್ ತಿರುಚುವಿಕೆ. ಕೆಇಎಪರೀಕ್ಷೆಯಲ್ಲಿ ಬ್ಲೂಟೂತ್ ನಕಲು ಜಾಲ ಸಕ್ರಿಯ.
ರೈತ ವಿರೋಧಿ: 35,162 ಕೋಟಿ ಬೆಳೆ ನಷ್ಟಕ್ಕೆ ನೆರವಿಲ್ಲ, ಕಾವೇರಿ ನೀರು ಹಂಚಿಕೆಯಲ್ಲಿ ರೈತರಿಗೆ ದ್ರೋಹ, ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸದೆ ರೈತರ ಆಕ್ರೋಶ. ಬಿಜೆಪಿಯ 4,000 ಕಿಸಾನ್ ಸಮ್ಮಾನ್ ಟಾಪ್ ಅಪ್, ರೈತ ಮಕ್ಕಳ ವಿದ್ಯಾನಿಧಿ ರದ್ದು. ಹೈನುಗಾರರ 606 ಕೋಟಿ ಪೆÇ್ರೀತ್ಸಾಹಧನ ಬಾಕಿ, ಕಬ್ಬು ಎಫ್ ಆರ್ ಪಿ ದರ ನೀಡದೆ ವಂಚನೆ, ಸಬ್ಸಿಡಿ ಯೂರಿಯಾ ಕಳ್ಳಸಾಗಣೆ.
ರಿಯಲ್ ಎಸ್ಟೇಟ್ ಸರ್ಕಾರ: ಬಿಡದಿ ಟೌನ್‍ಶಿಪ್ ಹೆಸರಿನಲ್ಲಿ 9,600 ಎಕರೆ ಫಲವತ್ತಾದ ಭೂಮಿ ಕಸಿ, ಸಿದ್ದರಾಮಯ್ಯ ಕುಟುಂಬದ ಮುಡಾ 50:50 ಹಗರಣ, ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದ ಟ್ರಸ್ಟ್‍ಗೆ ಏರೋಸ್ಪೇಸ್ ಪಾರ್ಕ್‍ನಲ್ಲಿ 5 ಎಕರೆ ಅಂ ನಿವೇಶನ ಅಕ್ರಮ ಮಂಜೂರು, ಸಚಿವ ಕೆ.ಜೆ.ಜಾರ್ಜ್ ಕಂಪನಿಯಿಂದ ಕಾಡುಗೋಡಿ ಅರಣ್ಯ ಒತ್ತುವರಿ, ರೈತರ ಮೇಲೆ ವಕ್ಫ್ ಅಕ್ರಮ ನೋಟಿಸ್ ಮೂಲಕ ಭೂ ಸುಲಿಗೆ.
ಕಾನೂನು ಸುವ್ಯವಸ್ಥೆ ಪತನ: ಹುಬ್ಬಳ್ಳಿ ಪೆÇಲೀಸ್ ಠಾಣೆ ದಾಳಿ, ಲಾಡ್ಲೆ ಮಶಾಕ್ ದರ್ಗಾ ಗಲಭೆಕೋರರ ದೇಶದ್ರೋಹ ಪ್ರಕರಣ ವಾಪಸ್‍ಗೆ ಯತ್ನ, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮೇಲೆ ಚಿತ್ತಾಪುರದಲ್ಲಿ ಕಾಂಗ್ರೆಸ್ ಗೂಂಡಾ ದಾಳಿ, ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮೇಲೆ ಬೆದರಿಕೆ ದಾಳಿ.
ಬೆಲೆ ಏರಿಕೆ ಹಾಗೂ ಬಡವರ ವಂಚನೆ: ಹಾಲಿನ ಪ್ರಮಾಣ ಕಡಿತ, ದರ 5 ಏರಿಕೆ, ರೈತರಿಂದ ಖರೀದಿ ದರ 3.50 ಕಡಿತ. ವಿದ್ಯುತ್ ಸ್ಥಿರ ಶುಲ್ಕ, ನೀರಿನ ದರ 3% ಏರಿಕೆ, ಕಸದ ಸೆಸ್, ಪೆಟ್ರೋಲ್-ಡೀಸೆಲ್ ಸೆಸ್, ಆಸ್ತಿ ಮಾರ್ಗಸೂಚಿ ದರ 50% ಏರಿಕೆ, ಕೆ ಎಸ್ ಆರ್ ಟಿ ಸಿ /ಬಿ ಎಂಟಿಸಿ15%, ಮೆಟ್ರೋ 51.55% ಏರಿಕೆ, ಜನನ-ಮರಣ ಪ್ರಮಾಣಪತ್ರ ದರ 10 ಪಟ್ಟು, ಅಬಕಾರಿ ಸುಂಕ 4 ಬಾರಿ ಏರಿಕೆ, ನಂದಿನಿ ತುಪ್ಪ ?90 ಏರಿಕೆ. ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು, ಅನ್ನಭಾಗ್ಯ ಅಕ್ಕಿಯಿಂದ ವಂಚನೆ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ ರದ್ದು.
ಸಾಲು ಸಾಲು ಭ್ರಷ್ಟಾಚಾರ: ಮೂಲಸೌಕರ್ಯದಲ್ಲಿ 60% ಕಮಿಷನ್, ಅಬಕಾರಿಯಲ್ಲಿ 6,000 ಕೋಟಿ ಲೂಟಿ, ಮದ್ಯ ವ್ಯಾಪಾರಿಗಳಿಂದ 700 ಕೋಟಿ ವಾರ್ಷಿಕ ಲಂಚ, ಪೆÇಲೀಸ್ ಪೆÇೀಸ್ಟಿಂಗ್‍ಗೆ 25 ಲಕ್ಷದಿಂದ 1 ಕೋಟಿ ದಂಧೆ, ಆರೋಗ್ಯ ಇಲಾಖೆ ಔಷಧಿ ಖರೀದಿಯಲ್ಲಿ 120 ಕೋಟಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಲಾಖೆಯಲ್ಲಿ 300 ಕೋಟಿ ನಕಲಿ ಆರೋಗ್ಯ ತಪಾಸಣೆ, ಜಲಸಂಪನ್ಮೂಲ 13,000 ಕೋ, ಲೋಕೋಪಯೋಗಿ 8,370 ಕೋ, ಗ್ರಾಮೀಣಾಭಿವೃದ್ಧಿ 3,800 ಕೋ, ಸಣ್ಣ ನೀರಾವರಿ 3,000 ಕೋ, ನಗರಾಭಿವೃದ್ಧಿ 2,000 ಕೋ, ವಸತಿ-ವಕ್ಫ್ 2,600 ಕೋ, ಕಾರ್ಮಿಕ 2,000 ಕೋ, ಬಿಬಿಎಂಪಿ 2,600 ಕೋ ಸೇರಿ 37,370 ಕೋಟಿ ಬಿಲ್ ಬಾಕಿ. 15,568 ಕೋಟಿ ಸ್ಮಾರ್ಟ್ ಮೀಟರ್ ಹಗರಣ, ಬಿಬಿಎಂ ಪಿ ಕಸ ಟೆಂಡರ್ 600 ಕೋಟಿಯಿಂದ 1,000 ಕೋಟಿಗೆ ಏರಿಕೆ, ಕಾಂಗ್ರೆಸ್ ಶಾಸಕ ಬಿ.ಆರ್.ಪಾಟಿಲ್ ಅವರೇ ವಸತಿ ಹಗರಣ ಬಯಲು, ಭೋವಿ ನಿಗಮದಲ್ಲಿ ಆಡಿಯೋ ಮೂಲಕ ಕಮಿಷನ್ ಬೇಡಿಕೆ, ಲಿಡ್ಕರ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದಿದ್ದಾರೆ