Home ಜಿಲ್ಲೆ ಸರ್ಕಾರಿ ಶಾಲೆ ಸುತ್ತಲಿನ ತಡೆಗೋಡೆ ನಿರ್ಮಾಣದಲ್ಲಿ ಭಾರಿ ಅವ್ಯವಹಾರ:ರವಿಕುಮಾರ

ಸರ್ಕಾರಿ ಶಾಲೆ ಸುತ್ತಲಿನ ತಡೆಗೋಡೆ ನಿರ್ಮಾಣದಲ್ಲಿ ಭಾರಿ ಅವ್ಯವಹಾರ:ರವಿಕುಮಾರ

ಸೈದಾಪುರ:ಜೂ.೩೦:ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಸುತ್ತ ನಿರ್ಮಿಸುತ್ತಿರುವ ತಡೆಗೋಡೆ ಕಾಮಾಗಾರಿಯಲ್ಲಿ ಕಳಪೆ ಗುಣಮಟ್ಟ ಹಾಗೂ ಬಾರಿ ಅವ್ಯವಹಾರದಿಂದ ಕೂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ ಕಡೇಚೂರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ೨೦೨೩-೨೪ನೇ ಸಾಲಿನ ಕೆಕೆಆರಡಿಬಿ ಯೋಜನೆಯಡಿ ಸುಮಾರು ₹೧.೫ ಕೋಟಿ ಅನುದಾನದಲ್ಲಿ ನಿರ್ಮಿಸುತ್ತಿರುವ ಶಾಲಾ ಕಾಂಪೌAಡ್‌ನ ಉದ್ದ೯೯೭ ಮೀಟರ್ ಇದ್ದು, ಸ್ಥಳದಲ್ಲಿ ಕೇವಲ ೩೩೦ ಮೀಟರ್ ಉದ್ದದ ಹಳೆಯ ಪಾಯದ ಮೇಲೆ ಹೊಸ ಗೋಡೆಯನ್ನು ಕಳಪೆ ಕಾಮಾಗಾರಿಯ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದು ನೈಜ ಅಳತೆ ಪರಿಶೀಲಿಸದೆ ಕಾಮಗಾರಿ ಆರಂಭಿಸಿರುವುದು ಜನರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ತಾಂತ್ರಿಕ ತಜ್ಞರ ತಂಡದಿAದ ಸ್ಥಳ ಪರಿಶೀಲನೆ ನಡೆಸಬೇಕು. ಹಳೆಯ ಪಾಯದ ಸಾಮರ್ಥ್ಯ, ಕಾಮಗಾರಿಯ ಅಂದಾಜು ವೆಚ್ಚ ಹಾಗೂ ಗುಣಮಟ್ಟದ ಮಾನದಂಡಗಳ ಕುರಿತು ಸಮಗ್ರ ತನಿಖೆ ನಡೆಸಿ, ಯಾವುದೇ ಅಕ್ರಮ ಅಥವಾ ನಿರ್ಲಕ್ಷ್ಯ ಕಂಡುಬAದಲ್ಲಿ ಸಂಬAಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಲೆಯ ಮುಂದೆ ಗ್ರಾಮಸ್ಥರೊಡನೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಹೇಶ ಜೇಗರ ಸೇರಿದಂತೆ ಇತರರಿದ್ದರು