
ಕಲಬುರಗಿ,ಜೂ.6-ನಗರದ ಕೆಪಿಇ ಸಂಸ್ಥೆಯ ಡಾ.ಅಂಬೇಡ್ಕರ್ ಪದವಿ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿಲಿಂದ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹದೇವ್ ಪೂಜಾರಿಯವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ಬೆಳೆಯುವ ಆಹಾರ ಎಲ್ಲವೂ ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ.ಸಿದ್ಧಪ್ಪ ಎಂ.ಕಾಂತಾ ಮಾತನಾಡುತ್ತ, ಪರಿಸರ ಸಂರಕ್ಷಣೆಯು ಒಂದು ದಿನದ ಆಚರಣೆಯಲ್ಲ, ಅದು ನಮ್ಮ ಬದುಕಿನ ಭಾಗವಾಗಬೇಕು. ಗಿಡಗಳನ್ನು ನೆಡುವುದು, ಪ್ರಕೃತಿಯನ್ನು ರಕ್ಷಿಸುವುದು ಎಂದರೆ ನಮ್ಮನ್ನು ನಾವು ರಕ್ಷಿಸಿಕೊಂಡಂತೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ವಿಜಯಕುಮಾರ್ ಡಿ. ಡಾ. ನಿರ್ಮಲಾ ಸಿರಗಾಪುರ್, ಡಾ. ಸುದರ್ಶನ್ ಮದನ್ಕರ್, ಡಾ.ಅರುಣ ಜೋಳದ ಕೂಡ್ಲಿಗಿ, ಡಾ.ಗಾಂಧೀಜಿ ಮೋಳಕೆರೆ, ಡಾ. ಸಿದ್ದಾರ್ಥ ಮದನ್ಕರ್ ,ಡಾ. ವಸಂತ ನಾಶಿ ,ಡಾ.ಹರ್ಷವರ್ಧನ ಬಿ,ಡಾ.ದತ್ತುರಾಯ ಡಾ.ಶಿವಕುಮಾರ ಹಡಪದ,ಡಾ.ಕರಬಸಪ್ಪ ಮೂಲಗೆ ಹಾಗೂ ಇತರು ಭಾಗವಹಿಸಿದ್ದರು.


























