
ಕಲಬುರಗಿ,ಅ.9-ಮನೆಯಲ್ಲಿದ್ದ 1.25 ಲಕ್ಷ ರೂ.ಮೌಲ್ಯದ 25 ಗ್ರಾಂ.ಬಂಗಾರದ ತಾಳಿ ಚೈನ್ ಕಳವಾಗಿದೆ ಎಂದು ಜಯತೀರ್ಥ ನಗರದ ಇಂದ್ರಾಬಾಯಿ ಸಂಗನಗೌಡ ಜವಳಗಿ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇವರ ಮನೆ ಕೆಲಸ ಮಾಡುತ್ತಿದ್ದ ಅದೇ ಬಡಾವಣೆಯ ಮಹಾನಂದ ಯಲ್ಲಾಲಿಂಗ ಅವರು ವಿನಾ ಕಾರಣ ಕೆಲಸ ಬಿಟ್ಟಿದ್ದು, ಕೆಲಸಕ್ಕೆ ಏಕೆ ಬರುತ್ತಿಲ್ಲ ಎಂದು ಕೇಳಿದಕ್ಕೆ ಎರಡು ಸಾವಿರ ರೂಪಾಯಿ ಕೊಟ್ಟರೆ ಮಾತ್ರ ಕೆಲಸ ಮಾಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಅದಕ್ಕೆ ಇಂದ್ರಾಬಾಯಿ ಅವರು 500 ರೂ. ತೆಗೆದುಕೊಂಡು ಕೆಲಸ ಮಾಡುವಂತೆ ಹೇಳಿದ್ದು, ಅದಕ್ಕೆ ಒಪ್ಪಿಕೊಂಡ ಮಹಾನಂದ ಅವರು ನಂತರ ಮನೆಗೆಲಸಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ. ಮಹಾನಂದ ಅವರೇ ತಾಳಿ ಚೈನ್ ಕಳವು ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಅವರ ವಿರುದ್ಧ ಇಂದ್ರಾಬಾಯಿ ಅವರು ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.























