Home ಜಿಲ್ಲೆ ಮಂಗಳೂರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿತೊಡಗಿದ್ದ ೮ ಮಂದಿ ಅಕ್ರಮ ಬಾಂಗ್ಲಾಪ್ರಜೆಗಳ ಬಂಧನ

ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿತೊಡಗಿದ್ದ ೮ ಮಂದಿ ಅಕ್ರಮ ಬಾಂಗ್ಲಾಪ್ರಜೆಗಳ ಬಂಧನ

ಸುರತ್ಕಲ್- ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿತೊ ಡಗಿದ್ದ ೮ ಮಂದಿ ಅಕ್ರಮ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊವಿಚಾರಣೆಯ ಬಳಿಕ ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್ ಮುಖ್ತಾರ್ ಅಲಿ ( ೩೬), ಮುಹಮ್ಮದ್ ರಾಕಿಬುರ್ ಹುಸೈನ್ (೪೪), ಮುಹಮ್ಮದ್ ಅಝರುಲ್ ಇಸ್ಲಾಂ ( ೩೬), ಮುಹಮ್ಮದ್ ಝೈ(೩೬), ಮುಹಮ್ಮದ್ ಹಾಸಿಬುಲ್ ಹಸನ್ ಶನ್ಟೊ ( ೩೭), ಮುಹಮ್ಮದ್ ಸಮೀವುಲ್ ಹಸನ್ ( ೨೩), ಮುಹಮ್ಮದ್ ಸೈಬುರ್ರಹ್ಮಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರೆಲ್ಲರೂ ಮೂರು ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮೂಲಕ ಭಾರತಕ್ಕೆ ಬಂದು ನಂತರ ಅಲ್ಲಿನಭಾವಚಿತ್ರ ಅಂಟಿಸಿ ಕಲರ್ ಜೆರಾಕ್ಸ್ ಪಡೆದುಕೊಂಡು ಎರಡು ತಿಂಗಳಿನಿಂದ ಮುಕ್ಕದಲ್ಲಿಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಮಂಗಳೂರು ನಗಮಾಹಿತಿ ನೀಡಿದ್ದಾರೆ.
ಮುಕ್ಕದ ನಿರ್ಮಾಣ ಹಂತದ ಕಡ್ಡಡಗಳ ಕಾಮಗಾರಿಯಲ್ಲಿಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿರುವ ಕುರಿತು ಸುರತ್ಕಲ್ ಪೊಲೀಸ್ ಉಪಬಂದಾಕ್ಷಣ ತಂಡ ದೊಂ ದಿಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಎರಡು ನಿರ್ಮಾಣ ಹಂತದ ಕಟ್ಟಡಗಳ ಬಳಿ ಜೋಪಡಿ ಹಾಕಿ ವಾಸವಿದ್ದಸುಮಾರು ೫೪ ಮಂದಿಯಸೇರಿದ ಬಾಂಗ್ಲಾದೇಶದ ಗುರುತಿನ ಚೀಚಿಗಳು ಪತ್ತೆಯಾಗಿತ್ತು. ಬಳಿಕ ಎಲ್ಲಾಎಂಟು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಅಧಿಕಾರಿಗಳ ಮೂಲಕ ವಿದೇಶಿಯರ ಪ್ರಾದೇಶಿಕ ನೋಂ ದಣಿ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಅವರ ಸೂಚನೆಯ ಮೇರೆಗೆ ಎಲ್ಲರನ್ನೂ ಬಂಧಿಸಿ ವಿದೇಶಿಯರ ಪ್ರಾದೇಶಿಕ ನೋಂ ದಣಿ ಕಚೇರಿಯ ಸುಪರ್ದಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
“ಅವರು ಮುರ್ಷಿದಾಬಾದ್ನಲ್ಲಿಸಿದ್ಧಪಡಿಸಿದ ಆಧಾರ್ ಕಾರ್ಡ್ಗಳನ್ನು ಗುತ್ತಿಗೆದಾರರಿಗೆ ನೀಡಿ ಇಲ್ಲಿಕೆಲಸ ಪಡೆದು ಕೊಂಡಿದ್ದು, ಆಧಾರ್ ಕಾರ್ಡ್ ಮಾಡಿಸುವಲ್ಲಿ ಮತ್ತು ಅದರ ಮಾಹಿತಿ ಗುತ್ತಿಗೆದಾರರಿಗೆ ಇದ್ದು ಅವರು ಕೆಲಸ ನೀಡಿರುವ ಬಗ್ಗೆಯಾವುದೇ ಪುರಾವೆಗಳು ಕಂಡುಬಂದಿಲ್ಲ. ಅಕ್ರಮ ವಲಸಿಗರ ವಿರುದ್ಧಪ್ರಕರಣ ದಾಖಲಾಗಿರುವ ಅನೇಕ ಪ್ರಕರಅವರು ಭಾರತದಿಂದ ಹೊ ರಹೋ ಗಬಹುದಾದ್ದರಿಂದ ಅವರು ಭಾರತದಲ್ಲಿಯೇ ಇರುತ್ತಾರೆ. ತನಿಖೆಯ ಬಳಿಕ ವಿದೇಶಿಯರ ಪ್ರಾದೇಶಿಕ ನೋಂ ದಣಿ ಕಚೇರಿ ಅವರನ್ನು ಗಡಿಪಾರು ಮಾಡಲಿದೆ”
ಸುದೀರ್ ಕುಮಾರ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಆಯುಕ್ತರು