Home ಜಿಲ್ಲೆ ಮಂಗಳೂರು ಸುಳ್ಯದಲ್ಲಿ ರಸ್ತೆ ಮಧ್ಯೆ ಇದ್ದ ವಿದ್ಯುತ್ ಕಂಬ ಸ್ಥಳಾಂತರಿಸದೇ ಕಾಂಕ್ರಿಟೀಕರಣ ವಿಚಾರ – ಗ್ಯಾರಂಟಿ ಸಭೆಯಲ್ಲಿ...

ಸುಳ್ಯದಲ್ಲಿ ರಸ್ತೆ ಮಧ್ಯೆ ಇದ್ದ ವಿದ್ಯುತ್ ಕಂಬ ಸ್ಥಳಾಂತರಿಸದೇ ಕಾಂಕ್ರಿಟೀಕರಣ ವಿಚಾರ – ಗ್ಯಾರಂಟಿ ಸಭೆಯಲ್ಲಿ ಚರ್ಚೆ

ಮೆಸ್ಕಾಂ ಎ.ಇ.ಇ., ನ.ಪಂ. ಮುಖ್ಯಾಧಿಕಾರಿಗೆ ನೋಟೀಸು ನೀಡಲು ಜಿಲ್ಲಾಧ್ಯಕ್ಷರ ಸೂಚನೆ
ಸುಳ್ಯ:ಸುಳ್ಯ ಸರಕಾರಿ ಆಸ್ಪತ್ರೆಯ ಪಕ್ಕದ ರಿಕ್ಷಾ ನಿಲ್ದಾಣದ ಎದುರಿನಿಂದಾಗಿ ಸರಕಾರಿ ಪಿಯು ಕಾಲೇಜು ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಬಳಸಿಕೊಂqವ ರಸ್ತೆ ಕಾಂಕ್ರೀಟ್ ನಡೆಸಿದ ವಿಚಾರ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಪ್ರತಿಧ್ವನಿಸಿ, ಮೆಸ್ಕಾಂ ಎ.ಇ.ಇ. ಹಾಗೂ ನ.ಪಂ. ಮುಖ್ಯಾಧಿಕಾರಿಗಳಿಗೆ ನೋಟೀಸು ನೀಡಲು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಸೂಚನೆ ನೀಡಿದ ಘಟನೆ ನಡೆದಿದೆ.
ಸುಳ್ಯ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿಯವರು, “ರಸ್ತೆಯ ಬದಿಯ ವಿದ್ಯುತ್ ಕಂಬವನ್ನು ಬಳಸಿ ಕಾಂಕ್ರೀಟ್ ರಸ್ತೆ ಮಾಡಿರುವುದು ಗಂಭೀರ ವಿಚಾರ. ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕೋಪಯೋಗಿ ಸಾರ್ವಜನಿಕ ರಸ್ತೆಯನ್ನು ಖಾಸಗಿಯವರು ಅವರಿಗೆ ಖುಷಿ ಬಂದ ರೀತಿಯಲ್ಲಿ ಮಾಡಲಾಗುವುದಿಲ್ಲ. ಹೇಗೆ ಮಾಡುತ್ತಾರೆ ಎಂದು ಮೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು. “ಇಲ್ಲಿ ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿಯವರು, “ಮೆಸ್ಕಾಂ ಎಇಇ, ನಗರ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ನೋಟೀಸು ನೀಡುವಂತೆ” ತಾ.ಪಂ. ಇ.ಒ. ರಾಜಣ್ಣರಿಗೆ ಸೂಚನೆ ನೀಡಿದರು.
ಗೃಹಲಕ್ಷ್ಮೀ ಯೋಜನೆಗೆ ಸುಳ್ಯ ತಾಲೂಕಿನಲ್ಲಿ ಇನ್ನೂ ೧೭೫೧ ಮಂದಿ ಅರ್ಜಿ ಸಲ್ಲಿಸಲು ಬಾಕಿ ಇದ್ದಾರೆ. ಇದಕ್ಕೆ ಸಮಿತಿ ಸದಸ್ಯರು ಗ್ರಾಮವಾರು ಪಟ್ಟಿ ತರಿಸಿಕೊಂಡು ಪರಿಶೀಲನೆ ಮಾಡಬೇಕು. ಅಹ್ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆ ವ್ಯಾಪ್ತಿಗೆ ತರುವ ಕೆಲಸ ಮಾಡಲು ಸದಸ್ಯರು ಗಮನ ಹರಿಸಬೇಕು. ಯೋಜನೆಯಿಂದ ಅರ್ಹ ಫಲಾನುಭವಿಗಳು ಬಿಟ್ಟುಹೋಗದಂತೆ ಗ್ಯಾರಂಟಿ ಸಮಿತಿ ಸದಸ್ಯರು ಕೆಲಸ ಮಾಡಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಯ ಹಣ ಪಡೆಯುತ್ತಿದ್ದ ೭೭೨ ಮಂದಿ ಮಹಿಳಾ ಸದಸ್ಯರು ಮೃತಪಟ್ಟಿದ್ದಾರೆ. ಇದರಲ್ಲಿ ೫೪೦ ಮಂದಿ ಕುಟುಂಬಗಳಿಗೆ ಸಹಾಯಧನ ಜಮೆ ಆಗುತ್ತಿಲ್ಲ. ೨೩೨ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಸಹಾಯಧನ ಜಮೆ ಆಗಿದೆ. ಆದರೆ ಇವರ ವಿಳಾಸ ಮಾಹಿತಿಗಳು ಸಿಗುತ್ತಿಲ್ಲ. ಮೃತಪಟ್ಟ ೧೯ ಜನರಿಗೆ ಜಮೆಯಾದ ಸಹಾಯಧನವನ್ನು ಸರಕಾರಕ್ಕೆ ವಾಪಸ್ ಪಾವತಿ ಮಾಡಲಾಗಿದೆ ಎಂದು ತಾಲೂಕು ಸಿಡಿಪಿಒ ಶೈಲಜಾ ಕುಕ್ಕುಜಡ್ಕ ಹೇಳಿದರು.
ಇದರಕ್ಕೆ ಉತ್ತರಿಸಿದ ಭರತ್ ಮುಂಡೋಡಿ ಸಾರ್ವಜನಿಕರ ಹಣವನ್ನು ಪೋಳು ಮಾಡಲು ಬಿಡಬಾರದು. ಜಿಲ್ಲೆಯಲ್ಲಿ ಸುಮಾರು ಮೂರು ಕೋಟಿ ಇಪ್ಪತ್ತಮೂರು ಲಕ್ಷದ ಮೂವತ್ತೆರಡು ಸಾವಿರ ಹಣ ಮೃತಪಟ್ಟವರ ಖಾತೆಗಳಿಗೆ ಜಮೆ ಆಗಿದೆ. ಸಮಿತಿಯ ಸದಸ್ಯರು ಮತ್ತು ಇಲಾಖೆಗಳ ಸಹಕಾರ ಪಡೆದು ಪತ್ತೆ ಹಚ್ಚು ಕಾರ್ಯ ಕೂಡಲೇ ನಡೆಸಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮೀ ಹೊಸ ಅರ್ಜಿಗೆ ಸೂಚನೆ ಬಂದಿಲ್ಲ :
ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಹೋಸದಾಗಿ ಅರ್ಜಿ ಸಲ್ಲಿಸಲು ಇಲ್ಲಿಯವರೆಗೆ ಯಾವುದೇ ಸೂಚನೆ ಬಂದಿಲ್ಲ. ಈ ಬಗ್ಗೆ ಜನರಲ್ಲಿ ಗೊಂದಲ ಏರ್ಪಟ್ಟಿದೆ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬೇಡಿ ಎಂದು ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮತ್ತು ಸಿಪಿಪಿಒ ಶೈಲಜಾ ಹೇಳಿದರು.
ಕೋರೋನಾಕ್ಕೆ ಮೊದಲು ಸುಳ್ಯ ತಾಲೂಕಿನ ರೂಟ್‌ಗಳಿಗೆ ಇದ್ದ ಬಸ್ ಸಂಪರ್ಕವನ್ನು ಮತ್ತೆ ಪುನರಾಂಭ ಮಾಡಬೇಕು ಎಂದು ಭರತ್ ಮುಂಡೋಡಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲ ಆರಂಭವಾಗಿದೆ ವಿದ್ಯುತ್ ಲೈನ್‌ನಲ್ಲಿ ಇರುವ ಅಪಾಯಕಾರಿ ಮರದ ಗೆಲ್ಲುಗಳನ್ನು ತೆರವು ಮಾಡಬೇಕು ಮತ್ತು ಅಪಾಯಕಾರಿ ತಂತಿಗಳನ್ನು ತೆರವು ಮಾಡಲು ಇ.ಒ ರಾಜಣ್ಣ ಮೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು.
ಜುಲೈ. ೬ರಂದು ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳು ಭಾಗವಹಿಸಬೇಕು. ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಸ್ವೀಕಾರಿಸಲು ವ್ಯವಸ್ಥೆ ಮಾಡಬೇಕು ಎಂದು ಭರತ್ ಮುಂಡೋಡಿ ಸೂಚಿಸಿದರು.
ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸಮಿತಿ ಸದಸ್ಯರುಗಳಾದ ಭವಾನಿಶಂಕರ ಕಲ್ಮಡ್ಕ, ಧನುಷ್ ಕುಕ್ಕೆಟ್ಟಿ, ಶೇಖರ ಕಣೆಮರಡ್ಕ, ಸೋಮಶೇಖರ ಕೇವಳ, ಈಶ್ವರ ಆಳ್ವ, ರಾಜು ನೆಲ್ಲಿಕುಮೇರಿ, ಅಬ್ಬಾಸ್ ಅಡ್ಪಂಗಾಯ, ವಿಜೇಶ್ ಹಿರಿಯಡ್ಕ, ರವಿ ಗುಂಡ್ಯಡ್ಕ, ಭವಾನಿ ಕಲ್ನಡ್ಕ, ಸದಸ್ಯ ಕಾರ್ಯದರ್ಶಿ, ತಾ.ಪಂ. ಇ.ಒ. ರಾಜಣ್ಣ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.