
ಸಂಜೆವಾಣಿ ನ್ಯೂಸ್
ಮೈಸೂರು,ಆ.2:- “ಪ್ರತಿಭೆ ಗ್ರಾಮೀಣರಲ್ಲಿ ಅಡಗಿದೆ. ಆ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕು. ರಾಷ್ಟ್ರದ ಪ್ರಗತಿಗೆ ಪ್ರತಿಭೆಗಳೇ ದಾರಿದೀಪ. ಪ್ರತಿ ಪೆÇೀಷಕರು ಮತ್ತು ಸಂಘಟನೆಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಬೇಕು” ಎಂದು ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ ಅವರು ಹೇಳಿದರು.
ಹುಣಸೂರಿನ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ದೀಪ ಬೆಳಗಿ, ನಾಡಪ್ರಭು ಕೆಂಪೇಗೌಡರು ಹಾಗೂ ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.
ಕಾರ್ಯಕ್ರಮದ ಉದ್ದೇಶ ಕುರಿತು ಪೆÇ್ರ.ಎಚ್.ಆರ್.ಸಿದ್ದೇಗೌಡರು ಮಾತನಾಡಿದರು.
ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ ಅವರು ಮಾತನಾಡಿ, “ಕೆಂಪೇಗೌಡರು 500 ವರ್ಷಗಳ ಹಿಂದೆ ಸರ್ವಜನಾಂಗದ ಕ್ಷೇಮ ಬಯಸಿ ಆಡಳಿತ ನಡೆಸಿದಂತೆ, ನಾನು ಕೂಡ ಶಾಸಕನಾಗಿ ತಾಲೂಕಿನ ಸರ್ವರ ಏಳಿಗೆಗೆ ಶ್ರಮಿಸುತ್ತೇನೆ. ಪಕ್ಕದ ತಾಲ್ಲೂಕಿನ ರಂಗಪ್ಪರಂತ ಗ್ರಾಮೀಣ ಪ್ರತಿಭೆ ರಸಾಯನ ಶಾಸ್ತ್ರದಲ್ಲಿ ಸಾಧನೆಗೈದು ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವುದು ನಮ್ಮೆಲ್ಲರ ಹೆಮ್ಮೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 6 ಜನ ಸಾಧಕರನ್ನು ಸನ್ಮಾನಿಸಲಾಯಿತು. ಜೊತೆಗೆ 150 ಪ್ರತಿಭಾವಂತ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಹಿರಿಯ ವಕೀಲ ಯೋಗಾನಂದ ಸ್ವಾಗತಿಸಿದರು. ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಅಧ್ಯಕ್ಷ ಗಣೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಸಾಲಿನಲ್ಲಿ ಕೆಂಪೇಗೌಡರ ಜಯಂತಿ ಮತ್ತು ಪ್ರತಿಭಾ ಪುರಸ್ಕಾರವನ್ನು ಇನ್ನೂ ಬೃಹತ್ತಾಗಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಪದಾಧಿಕಾರಿಗಳಾದ ಬಾಲಕೃಷ್ಣ, ಜಯರಾಮ್, ಸತೀಶ್, ಪಾಪಣ್ಣ, ರಾಮಕೃಷ್ಣ, ರಾಮಕೃಷ್ಣೆ ಗೌಡ, ಬಸವರಾಜ್, ಸುನೀತಾ ಜಯರಾಮ್, ಶಶಿ, ರಾಜು, ಕುಮಾರ್, ವಿನಯ್, ಗಂಗಾಧರ್, ಕವಿತಾ ಸೇರಿದಂತೆ 150 ವಿದ್ಯಾರ್ಥಿಗಳ ಪೆÇೀಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


































