
ಸಂಜೆವಾಣಿ ವಾರ್ತೆ
ಮಂಡ್ಯ:ಜು.25:- ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ನವದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿ ಗಳು ನಡೆಸಿದ ಹೋರಾಟ ವನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನೆಡೆಸಿದರು.
ನಗರದ ಜೆ.ಸಿ.ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು,ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವಾಗಲೂ ವಿದ್ಯಾರ್ಥಿ ಗಳ ಪರ ಇದೆ.ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾ ಗಿದೆ.ಆದರೂ, ಕಾಂಗ್ರೆಸ್ ಕೊಳಕು ರಾಜಕಾರಣ ಮಾಡುತ್ತಿದೆ.ದೇಶದ್ರೋಹಿ ಗಳೊಂದಿಗೆ ಪ್ರತಿಭಟನೆ ನಡೆಸಿ,ಮೋದಿ ಸರ್ಕಾರಕ್ಕೆ ಮಸಿ ಬಳಿಯಲು ಯತ್ನಿ ಸುತ್ತಿದೆ ಎಂದು ಟೀಕಿಸಿದರು.
ಡಾ.ಲಕ್ಷ್ಮಿಅಶ್ವಿನ್ ಗೌಡ ಮಾತನಾಡಿ ರಾಹುಲ್ ಕಳೆದ ಮೂರು ಬಾರಿಯಿಂದ 2014 ರಿಂದ ಸತತವಾಗಿ ಹೀನಾಯ ಸೋಲನ್ನ ಕಂಡಿದ್ದಾರೆ.ಒಂದು ಪಿತೂರಿಯನ್ನ ಮಾಡಿ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳ ಒಂದು ಈಗ ಹೋರಾಟ ಏನಿದೆ ಒಪ್ಪಿ ಕೊಳ್ಳೋಣ ನೀಟ್ ಪರೀಕ್ಷೆ ಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು ಅದಕ್ಕೆ ಏನು ಮಾಡ ಬೇಕು ನಮ್ಮ ಸರ್ಕಾರ ಸಂವಿಧಾನಾತ್ಮಕವಾಗಿ ತಕ್ಷಣವೇ ಅಲ್ಲಿ ಯಾರು ಪ್ರಶ್ನೆ ಪತ್ರಿಕೆಯ ಸೋರಿಕೆಗೆ ಕಾರಣರಾಗಿದ್ದರು ಅವರನ್ನ ಅರೆಸ್ಟ್ ಮಾಡಿ ಹತ್ತು ವರ್ಷ ಕಠಿಣ ಸಜೆಯನ್ನ ವಿಧಿ ಸುವುದರ ಜೊತೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಗಳನ್ನ ಮಾಡಿದ್ದೇವೆ ಅಂದ್ರೆ ಬೇಗ ನ್ಯಾಯದ ಮುಖಾಂತರ ಇತ್ಯರ್ಥ ವಾಗಲಿ ಎಂದು ತಿಳಿಸಿದರು.
ಮೋದಿಯವರ ನೇತೃತ್ವದಲ್ಲಿ ಆಯ್ಕೆಯಾಗಿರುವಂತಹ ಸರ್ಕಾರವನ್ನ ಏನಾದರೂ ಮಾಡಿ ನಾವು ಬೀಳಿಸಬೇಕು ಅಂತ ವಿದೇಶಿಯರ ಜೊತೆ ಸೇರಿಸಿ ನೀವೇನು ಹುನ್ನಾರ ಮಾಡ್ತಿದ್ದೀರಾ ಎಂದು ತಿಳಿಸಿದರು.
ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಮಾತನಾಡಿ ದೇಶದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ.
ಈ ಕಾರಣದಿಂದಾಗಿ ಪಕ್ಷ ಉಳಿಸಿಕೊಳ್ಳಲು ಪರದಾಟುತ್ತಿದ್ದಾರೆ.ಈ ನಿಟ್ಟಿನಲ್ಲಿ ಹೊರ ರಾಷ್ಟ್ರದಿಂದ ಯುವಕರನ್ನು ಕರೆದು ಕೊಂಡು ಬಂದು ವಿದ್ಯಾರ್ಥಿ ಗಳ ಸೋಗಿನಲ್ಲಿ ಪ್ರತಿಭಟನೆ ನಡೆಸುತ್ತಿದೆ.ಪ್ರಧಾನಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಿ ಸುವ ಮೂಲಕ ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮವೆಂದು ಕೇಂದ್ರ ಸರ್ಕಾರ ಹೇಳಿದೆ. ಜತೆಗೆ ಪ್ರಕರಣ ತ್ವರಿತ ವಿಚಾರಣೆ ಹಾಗೂ ದೋಷಿ ಗಳಿಗೆ ಕಠಿಣ ಶಿಕ್ಷೆ ವಿಧಿಸಲು ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಆದರೂ ಕಾಂಗ್ರೆಸ್ ನೀಟ್ ಪರೀಕ್ಷೆ ಹೆಸರಲ್ಲಿ ರಾಜಕೀಯ ಮಾಡುತ್ತಿದೆ.ಅಂದು ನೀಟ್ ಪರೀಕ್ಷೆ ನಡೆಯುವಾಗ ರ?ಯಾಲಿ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸಮಸ್ಯೆ ಮಾಡಿದ್ದು ಕಾಂಗ್ರೆಸ್ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಅಶೋಕ್ ಎಸ್.ಡಿ. ಜಯರಾಂ,ಡಾ.ಸಿದ್ದರಾಮಯ್ಯ, ಎಸ್.ಪಿ.ಸ್ವಾಮಿ, ಶ್ರೀಧರ್, ರಮೇಶ್,ವಿವೇಕ್, ವಿದ್ಯಾ ನಾಗೇಂದ್ರ,ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.


































