
ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಲಿವರ್ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಾಗ, ಲಿವರ್ ಕಸಿ (ಟ್ರಾನ್ಸ್ಪ್ಲಾಂಟ್) ಮಾಡಿಸುವುದು ಅತ್ಯಂತ ಪರಿಣಾಮಕಾರಿ ಮತ್ತು ಖಚಿತವಾದ ಚಿಕಿತ್ಸೆಯಾಗಿದೆ. ಸೂಕ್ತ ಸಮಯದಲ್ಲಿ ರೋಗ ಪತ್ತೆ ಹಚ್ಚುವುದು, ವಿಶೇಷ ಟ್ರಾನ್ಸ್ಪ್ಲಾಂಟ್ ವ್ಯವಸ್ಥೆಯ ಲಭ್ಯತೆ ಮತ್ತು ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರದ ಸಮಗ್ರ ಆರೈಕೆಯು ರೋಗಿಗೆ ಹೊಸ ಆಯುಷ್ಯ ನೀಡುವಲ್ಲಿ ಹಾಗೂ ಉತ್ತಮ ಜೀವನದ ಗುಣಮಟ್ಟವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮೈಸೂರು ಸುತ್ತಮುತ್ತಲಿನ ರೋಗಿಗಳಿಗೆ ಅವರ ಮನೆಯ ಹತ್ತಿರವೇ ಇಂತಹ ಅತ್ಯಾಧುನಿಕ ಕಸಿ ಚಿಕಿತ್ಸೆಗಳು ಲಭ್ಯವಾದರೆ, ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದು, ಗುಣಮುಖರಾಗುವವರೆಗೂ ಅತ್ಯುತ್ತಮ ಆರೈಕೆಯನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಇದೇ ಉದ್ದೇಶದಿಂದ, ಮೈಸೂರಿನ ಮಣಿಪಾಲ್ ಆಸ್ಪತ್ರೆಯು ಪತ್ರಿಕಾಗೋಷ್ಠಿ ನಡೆಸಿ, ‘ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಸೈನ್ಸಸ್’ (ಒIಉS) ವಿಭಾಗದಲ್ಲಿ ಆರಂಭಿಸಲಾದ ಲಿವರ್ ಕಸಿ ಚಿಕಿತ್ಸೆ ಮತ್ತು ಇತ್ತೀಚಿನ ಯಶಸ್ವಿ ಸರ್ಜರಿಗಳ ವಿವರಗಳನ್ನು ಹಂಚಿಕೊಂಡಿತು.
ಮಣಿಪಾಲ್ ಆಸ್ಪತ್ರೆ ಓಲ್ಡ್ ಏರ್ಪೆÇೀರ್ಟ್ ರೋಡ್ ಮತ್ತು ಮಣಿಪಾಲ್ ಆಸ್ಪತ್ರೆ ಮೈಸೂರಿನ ಲೀಡ್ ಕನ್ಸಲ್ಟೆಂಟ್ – ಹೆಚ್.ಪಿ.ಬಿ, ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಟ್ರಾನ್ಸ್ಪ್ಲಾಂಟ್ ಡಾ. ಜಯಂತ್ ರೆಡ್ಡಿ, ಡಾ. ನಾಗೇಶ್ ಪಿ. ಎನ್., ಲೀಡ್ ಕನ್ಸಲ್ಟೆಂಟ್ – ಮಲ್ಟಿ-ಆರ್ಗನ್ ಟ್ರಾನ್ಸ್ಪ್ಲಾಂಟ್ ಅನೆಸ್ತೇಷಿಯಾ, ಡಾ. ಸತೀಶ್ ರಾವ್ ಎ. ಕೆ., ಸೀನಿಯರ್ ಕನ್ಸಲ್ಟೆಂಟ್ – ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ , ಡಾ. ನಿಶ್ಚಯ್ ಆರ್., ಕನ್ಸಲ್ಟೆಂಟ್ ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ , ಡಾ. ವಾಸುದೇವ್ ಪೈ ಎಚ್., ಸೀನಿಯರ್ ಕನ್ಸಲ್ಟೆಂಟ್ – ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಚ್.ಪಿ.ಬಿ ಸರ್ಜನ್, ಡಾ. ಉಪೇಂದ್ರ ಶೆಣೈ, ಚೀಫ್ ಆಫ್ ಮೆಡಿಕಲ್ ಸರ್ವಿಸಸ್, ಡಾ. ಮಹಾದೇವ ಕೆ. ಕನ್ಸಲ್ಟೆಂಟ್ – ಐಸಿಯು ಮತ್ತು ಕ್ರಿಟಿಕಲ್ ಕೇರ್ ಹಾಗೂ ಮಣಿಪಾಲ್ ಆಸ್ಪತ್ರೆ, ಮೈಸೂರಿನ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ. ಜೆ. ಅವರ ಅವರನ್ನೊಳಗೊಂಡ ತಜ್ಞರ ತಂಡವು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿತ್ತು.
ಮೇ ಮಧ್ಯಭಾಗದಿಂದ ಜೂನ್ ಮಧ್ಯದವರೆಗೆ (ಕೇವಲ ಒಂದು ತಿಂಗಳಲ್ಲಿ) ಮೂವರಿಗೆ ಯಶಸ್ವಿಯಾಗಿ ಲಿವರ್ ಕಸಿ (ಆಆಐಖಿ) ಮಾಡಲಾಗಿದೆ. ಈ ಸಾಧನೆಯು ಮೈಸೂರು ಭಾಗದಲ್ಲಿಯೇ ಸಿಗುತ್ತಿರುವ ಅತ್ಯಾಧುನಿಕ ಮತ್ತು ಜೀವ ಉಳಿಸುವ ವೈದ್ಯಕೀಯ ಸೌಲಭ್ಯಕ್ಕೆ ಸಾಕ್ಷಿಯಾಗಿದೆ.
ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಡಾ. ಜಯಂತ್ ರೆಡ್ಡಿ ಮಾತನಾಡಿ, ಯಾವ ಔಷಧಿಗಳೂ ಕೆಲಸ ಮಾಡದಿದ್ದಾಗ ಲಿವರ್ ಕಸಿ ಒಂದೇ ರೋಗಿಯ ಜೀವ ಉಳಿಸುವ ದಾರಿ. ಪ್ರತಿ ಸರ್ಜರಿಯೂ ವಿಭಿನ್ನ ಮತ್ತು ಸವಾಲಿನಿಂದ ಕೂಡಿರುತ್ತದೆ. ಹಾಗಾಗಿ ಲಿವರ್ ಕೊಡುವವರು ಮತ್ತು ಪಡೆಯುವವರ ಆರೋಗ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವೈದ್ಯರ ತಂಡ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಈ ಯಶಸ್ವಿ ಚಿಕಿತ್ಸೆಗಳಿಂದಾಗಿ ಮೈಸೂರು ಸುತ್ತಮುತ್ತಲಿನ ಜನರಿಗೆ ಇನ್ನು ಮುಂದೆ ತಮ್ಮ ಮನೆಯ ಹತ್ತಿರವೇ ಅತ್ಯಾಧುನಿಕ ಲಿವರ್ ಕಸಿ ಸೌಲಭ್ಯ ಸಿಗುವಂತಾಗಿದೆ ಎಂದರು.
ಡಾ. ನಾಗೇಶ್ ಪಿ. ಎನ್. ಮಾತನಾಡಿ, “ಲಿವರ್ ಕಸಿ ಯಶಸ್ವಿಯಾಗಲು ಬರೀ ಸರ್ಜರಿ ಮಾತ್ರ ಸಾಲದು. ಸುರಕ್ಷಿತವಾಗಿ ಅರವಳಿಕೆ ನೀಡುವುದು, ಸರ್ಜರಿ ಸಮಯದಲ್ಲಿ ರೋಗಿಯ ಆರೋಗ್ಯದ ಮೇಲೆ ನಿರಂತರ ನಿಗಾ ಇಡುವುದು ಮತ್ತು ವೈದ್ಯರ ತಂಡದ ಒಗ್ಗಟ್ಟಿನ ಕೆಲಸ ತುಂಬಾ ಮುಖ್ಯ. ರೋಗಿ ಬೇಗ ಗುಣಮುಖರಾಗಿ, ದೀರ್ಘಕಾಲ ಆರೋಗ್ಯವಾಗಿರಲು ಪ್ರತಿ ಹಂತದಲ್ಲೂ ಪೂರ್ಣ ನಿಗಾ ವಹಿಸಲಾಗುತ್ತದೆ,” ಎಂದರು.
ಕೊನೆಯಲ್ಲಿ ನಡೆದ ಸಂವಾದದಲ್ಲಿ, ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ತಜ್ಞ ವೈದ್ಯರು ಉತ್ತರಿಸಿದರು. ಈ ವೇಳೆ ಲಿವರ್ ಕಸಿ, ಅಂಗಾಂಗ ದಾನ, ಯಾರಿಗೆ ಈ ಚಿಕಿತ್ಸೆ ಅಗತ್ಯವಿರುತ್ತದೆ ಮತ್ತು ಮರಣಾನಂತರದ ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕುರಿತು ಚರ್ಚಿಸಲಾಯಿತು.


































