Home ಜಿಲ್ಲೆ ಮಂಗಳೂರು ದೈಹಿಕ ಕಿರುಕುಳ ಆರೋಪ : ಪತಿ ಸೇರಿ ೬ ಮಂದಿ ವಿರುದ್ಧ ಪ್ರಕರಣ ದಾಖಲು

ದೈಹಿಕ ಕಿರುಕುಳ ಆರೋಪ : ಪತಿ ಸೇರಿ ೬ ಮಂದಿ ವಿರುದ್ಧ ಪ್ರಕರಣ ದಾಖಲು

ಮಂಗಳೂರು : ನಗರದ ಕೋಡಿಯಾಲ್ ನಿವಾಸಿ ಶ್ರೀದೇವಿ ರಾಘವೇಂದ್ರ ಆಚಾರ್ಯ ಸಮೃದ್ಧಿ ಎಂಬವರು ತನಗೆ ಗಂಡ ಹಾಗೂ ಆತನ ಮನೆಯವರು ಮಾನಸಿಕ, ದೈಹಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶ್ರೀದೇವಿ ರಾಘವೇಂದ್ರ ಆಚಾರ್ಯ ಸಮೃದ್ಧಿ ಅವರು ನೀಡಿರುವ ದೂರಿನಂತೆ ಆಕೆಯ ಪತಿ ಮಂಗಳೂರಿನ ಕಾರ್‌ಸ್ಟ್ರೀಟ್ ನಿವಾಸಿ ರಾಘವೇಂದ್ರ ಆಚಾರ್ಯ, ಪತಿಯ ತಂದೆ ನರಸಿಂಹ ಆಚಾರ್ಯ, ತಾಯಿ ಗಾಯತ್ರಿ ಆಚಾರ್ಯ, ಸಹೋದರಿಯರಾದ ವೈಶಾಲಿ ಆಚಾರ್ಯ, ಕ್ಷಮಾ ಆಚಾರ್ಯ ಮತ್ತು ಐಶ್ವರ್ಯ ಆಚಾರ್ಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
೨೦೨೪ರ ಡಿ.೨೨ರಂದು ರಾಘವೇಂದ್ರ ಆಚಾರ್ಯ ಮತ್ತು ಶ್ರೀದೇವಿ ಇವರ ವಿವಾಹವಾಗಿತ್ತು. ಬಳಿಕ ಗಂಡನ ಮನೆ ಸೇರಿದ ಶ್ರೀದೇವಿ ಅವರಿಗೆ ಗಂಡ ಹಾಗೂ ಆತನ ಮನೆ ಮಂದಿ ಕಿರುಕುಳ ನೀಡಲಾರಂಭಿಸಿದ್ದರು. ತನ್ನ ಗಂಡನಿಗೆ ಅನೈತಿಕ ಸಂಬಂಧ ಇದೆ, ಶ್ರೀದೇವಿ ಹೆಸರನ್ನು ಶ್ರೀದೇವಿ ರಾಘವೇಂದ್ರ ಆಚಾರ್ಯ ಎಂದು ಒತ್ತಾಯಪೂರ್ವಕವಾಗಿ ಗಂಡನ ಮನೆಯವರು ಬದಲಾಯಿಸಿದ್ದಾರೆ, ಗರ್ಭಿಣಿಯಾಗಿದ್ದಾಗಲೂ ತನ್ನ ಮೇಲೆ ಹಲ್ಲೆ ನಡೆಸಿದ್ದರು, ಹೆರಿಗೆಯಾದ ಬಳಿಕ ತನ್ನನ್ನು ಹಾಗೂ ಮಗುವನ್ನು ಸರಿಯಾಗಿ ನೋಡದೆ ಅತ್ತೆ, ಮಾವ ಹಾಗೂ ನಾದಿನಿಯರು ಅವಮಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀದೇವಿ ಆಚಾರ್ಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀದೇವಿ ರಾಘವೇಂದ್ರ ಆಚಾರ್ಯ ನೀಡಿರುವ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.