
ಕಲಬುರಗಿ: ರವಿ ಹಂಜ್ ಎಂಬ ವ್ಯಕ್ತಿ ‘ಬಸವ ಮಂಟಪ ಎಂಬ ವಿಕೃತಿಯಲ್ಲಿ ವೈಚಾರಿಕ ಕ್ರಾಂತಿಯ ಮೂಲಕ ಜಗತ್ತಿಗೆ ಬೆಳಕು ತೋರಿದ ಜಗಜ್ಯೋತಿ ಬಸವಣ್ಣನವರ ವಿಚಾರಧಾರೆಗಳಿಗೆ ಅವಹೇಳನ ಮಾಡಿದ್ದನ್ನು ಯಾವುದೇ ಕಾರಣಕ್ಕೂ ಅಪಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಗುರಮಠಕಲ ಮತಕ್ಷೇತ್ರದ ಉಸ್ತುವಾರಿ ರಾಜಗೋಪಾಲರೆಡ್ಡಿ ಮುದಿರಾಜ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಬಸವ ಭಕ್ತರೆ,ಕೇವಲ ಲಿಂಗಾಯತ ಬಸವಣ್ಣನವರು ಧರ್ಮಿಯನಲ್ಲ, ಸಕಲ ಜೀವಾತ್ಮರ ಲೇಸ ಬಯಸಿದಾತ ಕ್ರಾಂತಿ ಪುರುಷನೂ ಭಕ್ತಿ ಭಂಡಾರಿ ಸಾಂಸ್ಕೃತಿಕ ನಾಯಕನಾದ ಬಸವಣ್ಣನವರ ಕುರಿತು ಬಸವ ಮಂಟಪ ಕೃತಿಯಲ್ಲಿ ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿರುವ ರವಿ ಹಂಜ ಲೇಖಕರ ಅಭಿಪ್ರಾಯಗಳು ಅವರು ತೀವ್ರವಾಗಿ ಖಂಡಿಸಿದ್ದಾರೆ. ಬಸವಣ್ಣನವರಿಗೆ ಅವಮಾನಿಸಿದ ಇಂತಹ ಆಧುನಿಕ ಕೊಂಡಿ ಮಂಚಣ್ಣನವರಿಗೆ ಶಿಕ್ಷೆಗೆ ಒಳಪಡಿಸಿ, ಕೂಡಲೇ ಸರ್ಕಾರವು ಸದರಿ ಕೃತಿಯನ್ನು ಮುಟ್ಟುಗೋಲು ಹಾಕಬೇಕು ಎಂದರು.
ಬುದ್ಧನ ನಂತರ ಜಗತ್ತಿಗೆ ಸಮ ಸಮಾಜದ ವಿಚಾರವನ್ನು, ಪ್ರಜಾಪ್ರಭುತ್ವದ ಮಾದರಿಯನ್ನು ತೋರಿಸಿಕೊಟ್ಟಿದ್ದು ಬಸವಣ್ಣ,ಅವರು ಕನ್ನಡಿಗರ ಹೆಮ್ಮೆ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಆದಿಯಾಗಿ ಮಹನೀಯರಿಂದ ಗೌರವಿಸಲ್ಪಟ್ಟ ಬಸವಣ್ಣನವರ ಕಾಯಕ, ದಾಸೋಹ, ಸಮತೆಯ ತತ್ವಗಳು ನಮ್ಮೆಲ್ಲರಿಗೆ ದಾರಿದೀಪ, ನಮ್ಮ ಸರಕಾರವೂ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು. ಲಿಂಗಾಯತ ಎಂಬ ವೈಚಾರಿಕ ಪರಂಪರೆಯನ್ನು ಬಸವಣ್ಣನವರನ್ನು ಅಪ್ರಸ್ತುತಗೊಳಿಸುವುದನ್ನು ಪ್ರಜ್ಞಾವಂತ ಕನ್ನಡಿಗರು ಕೂಡಾ ಸಹಿಸುವುದೂ ಇಲ್ಲ ಎಂದು ಅವರು ಖಂಡಿಸಿದ್ದಾರೆ.





















