
ಚಿಕ್ಕಮಗಳೂರು,ಜು.೨೪: ಮುಲ್ಲಾಗಳಿಗೂ, ನೀಟ್ ಪರೀಕ್ಷೆಗೂ ಏನು ಸಂಬಂಧ? ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನಿವಾಸದೆದುರು ಕಾಂಗ್ರೆಸ್ ಧರಣಿ ಖಂಡಿಸಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಬಂದ ಮುಲ್ಲಾ ಗಳು ಧಮೇಂದ್ರ ಪ್ರಧಾನ್ ರಾಜೀನಾಮೆ ಕೇಳುತ್ತಾರೆ, ಮೋದಿ ಹಠಾವೋ ಅಂತಾರೆ. ಸಿಎಎಗೂ, ಎನ್‌ಆರ್‌ಸಿಗೂ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೂ ಏನು ಸಂಬಂಧ ಭಾರತವನ್ನು ತುಂಡರಿಸಬೇಕು ಎಂದು ಹೇಳಿದ ತುಕಡೆ ಗ್ಯಾಂಗ್‌ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು.ಅಲ್ಲದೆ, ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ, ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ. ಆತ ಬಂದು ನೀಟ್ ವಿರುದ್ದ ಹೋರಾಟ ಮಾಡುತ್ತಿದ್ದಾನೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್, ಎಡಪಕ್ಷಗಳು,ಆಮ್ ಆದ್ಮಿ ಪಕ್ಷಗಳಾಲಿ ಸರ್ಟಿಫಿಕೆಟ್ ಕೊಡಬೇಕಾದ ಅವಶ್ಯಕತೆ ಇಲ್ಲ. ದೇಶದ ಜನರೇ ಮೋದಿ ಅವರಿಗೆ ಸರ್ಟಿಫಿಕೆಟ್ ಕೊಟ್ಟು ಮೂರನೇ ಬಾರಿಗೆ ಪ್ರಧಾನಿ ಮಾಡಿದ್ದಾರೆ.ಈಗಾಗಲೇ ಹಲವು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ.ಕೌನ್ಸಿಲಿಂಗ್ ನಲ್ಲಿ ಸೀಟು ಆಯ್ಕೆ ಮಾಡಿಕೊಂಡಿದ್ದಾರೆ.ಕೆಲವು ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದಿದ್ದಾರೆ. ಇದೆಲ್ಲಾ ಗಮನಿಸಿದರೇ ಕೇಂದ್ರ ಸರ್ಕಾರದ ಮೇಲೆ ಹಾಗೂ ನರೇಂದ್ರ ಮೋದಿ ಮೇಲೆ ವಿದ್ಯಾರ್ಥಿಗಳು ಇಟ್ಟಿರುವ ನಂಬಿಕೆ ತೋರಿಸುತ್ತದೆ ಎಂದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹೋರಾಟದಲ್ಲಿ ತುಕಡೆ ಗ್ಯಾಂಗ್ ಗಳು ಭಾಗವಹಿಸುತ್ತವೆ, ಆ ಗ್ಯಾಂಗ್ ಗಳಿಗೂ ಪ್ರತಿಭಟನೆಗೂ ಏನ್ ಸಂಬಂಧ?ಇದೆಲ್ಲಾ ನೋಡಿದರೇ ಎಲ್ಲಿರಿಗೂ ಎಲ್ಲವೂ ತಿಳಿಯುತ್ತದೆ ಎಂದು ಪರೋಕ್ಷವಾಗಿ ವಿಪಕ್ಷಗಳ ವಿರುದ್ಧ ಹರಿಹಾಯ್ಸರು.































