
ನಾನೊಂದ ನೆನೆದೊಡೆ ತಾನೊಂದ ನೆನೆವುದು….. ಎಂಬ ಬಸವಣ್ಣನವರ ಈ ವಚನ ಪ್ರತಿಯೊಬ್ಬರ ಮನದ ವಿಚಿತ್ರ ವ್ಯವಸ್ಥೆ ಹಾಗೂ ಹೊಯ್ದಾಟವನ್ನು ಚಿತ್ರಿಸುತ್ತದೆ. ಅಕ್ಕ ಮಹಾದೇವಿ ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ ಎಂದು ಮನೋವಿಕಾರತೆಯ ಬಗ್ಗೆ ವಿವರಿಸುತ್ತಾರೆ. ಮನಷ್ಯನ ದುಕನ್ನು ಅಲ್ಲೋಲಕಲ್ಲೋಲ ಮಾಡುತ್ತದೆ. ನಾ, ನೀ ಅನ್ನುವವರನ್ನು ಎಡಮುರಿಗಟ್ಟಿದೆ ಈ ಮಾಯೆ. ಎಂಥೆಂಥವರೂ ಈ ಮಾಯೆಯ ದವಡೆಗೆಸಿಕ್ಕಿದ್ದಾರೆ. ಈ ಮಾಯೆಯನ್ನು ಗೆದ್ದವರು ಮಹಾನುಭಾವರು, ಸಂತರು, ಶಿವಯೋಗಿಗಳು ಎನಿಸಿಕೊಳ್ಳುತ್ತಾರೆ.
ಬ್ರಹ್ಮ ಘನವೆಂಬೆನೆ ಬ್ರಹ್ಮನ ನುಂಗಿತ್ತು ಹೀಗೆ ವಿಷ್ಣು, ರುದ್ರ,ತಾ ಸೇರಿದಂತೆ ಎಲ್ಲರೂ ಮಯಾಕೋಲಾಹಲಕ್ಕೀಡಾದವರೇ ಎಂಬುದನ್ನು ಅಲ್ಲಮಪ್ರಭುಗಳು ಈ ವಚನದಲ್ಲಿ ತಿಳಿಸಿದ್ದಾರೆ.
ಚಾಮರಸ ವಿರಚಿತ ಪ್ರಭುಲಿಂಗಲೀಲೆಯ ಮೂರನೆ ಗತಿಯಲ್ಲಿ ಮಾಯೆ ಹುಟ್ಟಿದ ಪ್ರಸಂಗವನ್ನು ಬಹಳ ವಿಸ್ತಾರವಾಗಿ ಷಟ್ಪದಿಕಾವ್ಯದಲ್ಲಿ ಆ ವಿಚಾರಗಳನ್ನು ಹೇಳುತ್ತ ಹೋಗುತ್ತಾರೆ. ಈ ಮಾಯೆ ಕುರಿತಾದ ಗತಿ ಒಂದು ಕಡೆಯಾದರೆ, ಮನುಷ್ಯನಬದುಕಿನಲ್ಲಿ ಯಾವ್ಯಾವುದೋ ಸಂದರ್ಭ ದಲ್ಲಿ ಗತಿಕೆಡಿಸುವ ಪ್ರಸಂಗಗಳು ಎದುರಾಗುತ್ತವೆ.ಭೂಕಾಂತೆಗೆ ಒಪ್ಪುವ ಮುಖವಲ್ಲಿಶೃಂಗಾರದ ತಿರುಳಿನ ಮನೆಯಲ್ಲಿ ಸೌಂದರ್ಯದ ಸುಖದ ಆವಾಸ ಸ್ಥಾನವೂಚೆಲುವಾದ ರತ್ನಗಳು ಹೊರ ಚೆಲ್ಲುವ ಮನೋಹರವಾದ ಸಮುದ್ರ… ಹೀಗೆ ಅಲ್ಲಮಪ್ರಭುಗಳಿಗೆ ಕೋಲಾಹಲವುಂಟು ಮಾಡಿದಮಾಯೆಯ ಹುಟ್ಟು, ಆ ಪ್ರದೇಶ ಸಿರಿವಂತಿಕೆ, ಅಲ್ಲಿನ ವಿಶೇಷತೆ ಇತ್ಯಾದಿಗಳ ಕುರಿತಾಗಿ ಬಹಳ ಶೃಂಗಾರಮಯವಾಗಿ, ಬಹಳರಸವತ್ತಾಗಿ ಚಾಮರಸ ಕವಿ ಚಿತ್ರಿಸುತ್ತಾರೆ.
-ಪೂಜ್ಯ ಮಹಾಂತಸ್ವಾಮಿಗಳು, ಕಲ್ಯಾಣಾಶ್ರಮ, ಮುದಗಲ್































