Home ಜಿಲ್ಲೆ ಕಲಬುರಗಿ ಪರಿಸರ ಹಾಳಾದ ಕಾರಣ ಮಳೆ ಹೋಗಿವೆ:ವಿಜಯಕುಮಾರ ರೋಣದ

ಪರಿಸರ ಹಾಳಾದ ಕಾರಣ ಮಳೆ ಹೋಗಿವೆ:ವಿಜಯಕುಮಾರ ರೋಣದ

ಕಲಬುರಗಿ,ಜು.24-“ಯಾತಕ್ಕ ಮಳೆ ಹೋದವೋ” ಎಂಬ ವಿಷಯದ ಮೇಲೆ ವಿಜಯಕುಮಾರ್ ರೋಣದ ಅವರು ಪರಿಸರ ಹಾಳಾದ ಕಾರಣವೇ ಮಳೆ ಹೋಗಿವೆ. ಆ ಕಾರಣ ಪರಿಸರ ಸಂರಕ್ಷಣೆಯ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದರು. ಅದರಲ್ಲಿ ಮುಖ್ಯವಾಗಿ ನಿಸರ್ಗ ಪ್ರೇಮ ಬೆಳೆಸಿಕೊಳ್ಳುವುದು, ಗಿಡ ಮರ ಹೆಚ್ಚು ಬೆಳೆಸುವುದು, ಹೂದೋಟ ನಿರ್ಮಾಣ, ಮಾಲಿನ್ಯ ನಿಯಂತ್ರಣ, ಶಕ್ತಿ ಬಳಕೆಯಲ್ಲಿ ಮಿತವ್ಯಯ, ವನಮಹೋತ್ಸವ ಆಚರಣೆ, ಇತ್ಯಾದಿ ಅಂಶಗಳನ್ನು ಹೇಳುತ್ತಾ ಪರಿಸರ ಪ್ರೇಮಿ ಸುಂದರ್ಲಾಲ್ ಬಹುಗುಣ, ಪರಿಸರ ವಿಜ್ಞಾನಿ ನಾಗೇಶ್ ಹೆಗಡೆ, ಗಿಡ ಮರಗಳನ್ನು ಮಕ್ಕಳಂತೆ ಬೆಳೆಸಿದ ಸಾಲುಮರದ ತಿಮ್ಮಕ್ಕ, ನರ್ಮದಾ ಬಚಾವೋ ಚಳುವಳಿಯ ರೂವಾರಿ ಮೇಧಾ ಪಾಟ್ಕರ್, ಚಲನಚಿತ್ರ ನಿರ್ದೇಶಕ ಸುರೇಶ್ ಹೆಬ್ಳಿಕರ್ ಇವರನ್ನು ಸ್ಮರಿಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಚಕೋರ ಸಾಹಿತ್ಯ ವೇದಿಕೆ ಅಡಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ಗವಿಸಿದ್ದಪ್ಪ ಹೆಚ್ ಪಾಟೀಲ್ ಅವರು ಪ್ರಾಸ್ತಾವಿಕ ಮಾತಾಡಿ ಸ್ವಾಗತಿಸಿದರು. ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಆಶಯ ನುಡಿಗಳನ್ನು ಆಡಿ ವಿದ್ಯಾರ್ಥಿಗಳು ಪರಿಸರ ಪ್ರೇಮ ಬೆಳಿಸಿಕೋಬೇಕು. ತಮ್ಮ ಮನೆಯ ಸುತ್ತ ಮುತ್ತಲಿನಲ್ಲಿ ಗಿಡಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಕೈಯಲ್ಲಿ ಇರುವ ಮೊಬೈಲ್ ಮತ್ತು ಮನೆಯಲ್ಲಿ ಇರುವ ಟಿವಿಯಲ್ಲಿ ಬರುವ ಕೆಟ್ಟ ರೀಲ್ಸಗಳನ್ನು ನೋಡಿ ಮನಸು ವಿಕಾರ ಮಾಡಿಕೋ ಬಾರದು. ಅವರು ನೈತಿಕತೆ ಬೆಳೆಸುವ ಬಸವಾದಿ ಶರಣರ ಹಾಗೂ ಇತರೇ ಲೇಖಕರ ಸಾಹಿತ್ಯ ಕೃತಿಗಳನ್ನು ಓದಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಜಡ್ ಎನ್ ಜಾಗಿರ್ದಾರ್ ಅವರು ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ ನಾಗರತ್ನ ಇಂಡೆ ಅವರು ಕಾರ್ಯಕ್ರಮ ನಿರೂಪಿಸಿದರು.