
ಕಲಬುರಗಿ:ಸಮಾಜ ಕಲ್ಯಾಣ ಇಲಾಖೆಯ ಅಂತರಜಾತಿ ವಿವಾಹ ಯೋಜನೆಯಲ್ಲಿ 2018 ರಿಂದ 2026ರವರೆಗೆ ನಡೆದಿರುವ ಅಕ್ರಮ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು. ಸಮಿತಿ ಜಿಲ್ಲಾ ಅಧ್ಯಕ್ಷ ಸಚಿನ್ ಚವ್ಹಾಣ್, ಮೊಶಿನ್ ಪಟೇಲ್, ಶಿವಪುತ್ರ ಗರೂರ್, ದೇವಪ್ಪ ನೆಲೋಗಿ, ಸೀತಾರಾಮ ಪವಾರ್ ಸೇರಿದಂತೆ ಮತ್ತಿತರರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.































