Home ಜಿಲ್ಲೆ ತುಮಕೂರು ಕಳ್ಳಿಪಾಳ್ಯ ರೈಲ್ವೆ ಗೇಟ್ ರಸ್ತೆ ಕೆಳ ಸೇತುವೆ ಕಾಮಗಾರಿಗೆ ಶಿಲಾನ್ಯಾಸ

ಕಳ್ಳಿಪಾಳ್ಯ ರೈಲ್ವೆ ಗೇಟ್ ರಸ್ತೆ ಕೆಳ ಸೇತುವೆ ಕಾಮಗಾರಿಗೆ ಶಿಲಾನ್ಯಾಸ

ತುಮಕೂರು, ಜೂ. ೧- ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಳ್ಳಿಪಾಳ್ಯ ಗೇಟ್ ಎಲ್‌ಸಿ ಸಂಖ್ಯೆ ೪೮ರ ಬದಲಿಗೆ ರಸ್ತೆ ಕಳ ಸೇತುವೆಗೆ (ಖUಃ) ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು.


ನಂತರ ಮಾತನಾಡಿದ ಅವರು, ಈ ಯೋಜನೆಯು ಸಾರ್ವಜನಿಕರಿಗೆ ಸುರಕ್ಷತೆ, ಸಂಪರ್ಕ ಮತ್ತು ಸಾರಿಗೆಯ ಸೌಲಭ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹೇಳಿದರು.


ರಸ್ತೆ ಕೆಳ ಸೇತುವೆ ಕಾಮಗಾರಿಯಿಂದ ಕಳ್ಳಿಪಾಳ್ಯ ಹಾಗೂ ಈ ಭಾಗದ ಹಳ್ಳಿಗಳ ಜನರ ಓಡಾಟಕ್ಕೆ ತುಂಬಾ ಅನುಕೂಲವಾಗಲಿದೆ ಎಂದರು.


ಈ ಸಂದರ್ಭದಲ್ಲಿ, ಶಾಸಕರಾದ ಎಸ್.ಆರ್ ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ರೈಲ್ವೆ ಅಧಿಕಾರಿಗಳಾದ ಪ್ರವೀಣ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.