ಕಲಬುರಗಿ: ಬಹುಜನ ಸಮಾಜ ಪಕ್ಷದ ರಾಯಚೂರು ಜಿಲ್ಲೆ ಉಸ್ತುವಾರಿ ಭೂಮಾನಂದ ಹದ್ದಿನಾಳ ಅವರ ಹತ್ಯೆಯನ್ನು ಖಂಡಿಸಿ,ಆರೋಪಿಗಳ ಶೀಘ್ರ ಬಂಧನ,ಮೃತರ ಕುಟುಂಬಕ್ಕೆ ಸೂಕ್ತ ಭದ್ರತೆ, ಪರಿಹಾರಕ್ಕೆ ಆಗ್ರಹಿಸಿ ಇಂದು ಬಹುಜನ ಸಮಾಜ ಪಕ್ಷ ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಶಿವಯೋಗಿ ಹಡಗಿಲ್‍ಕರ್, ಎಲ್.ಆರ್ ಭೋಸಲೆ,ಡಾ.ಅನೀಲ ಟೆಂಗಳಿ,ತಿಪ್ಪಣ್ಣ ಕಿನ್ನೂರು, ಉಚ್ಛೇಶ್ವರ ವಠಾರ,ಮೈಲಾರಿ ಶೆಳ್ಳಗಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.