Home ಜಿಲ್ಲೆ ತುಮಕೂರು ಜೆಡಿಎಸ್ ನಗರ ಜಂಟಿ ಕಾರ್ಯದರ್ಶಿ ಅಚ್ಯುತ್ ನೇಮಕ

ಜೆಡಿಎಸ್ ನಗರ ಜಂಟಿ ಕಾರ್ಯದರ್ಶಿ ಅಚ್ಯುತ್ ನೇಮಕ

ತುಮಕೂರು, ಆ. ೧- ಜಾತ್ಯತೀತ ಜನತಾದಳದ ತುಮಕೂರು ನಗರಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಎಸ್. ಅಚ್ಯುತ್‌ಯಾದವ್ ಅವರನ್ನು ನಗರಾಧ್ಯಕ್ಷ ಟಿ.ಹೆಚ್. ಜಯರಾಮ್ ನೇಮಕ ಮಾಡಿದ್ದಾರೆ.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ನಿಂಗಪ್ಪ ಅವರು ನೇಮಕಾತಿ ಪತ್ರ ವಿತರಿಸಿ, ನೀಡಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಜೆಡಿಎಸ್ ಸಂಘಟನೆ, ಬೆಳವಣಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಜೆಡಿಎಸ್ ನಗರ ಅಧ್ಯಕ್ಷ ಟಿ.ಹೆಚ್. ಜಯರಾಮ್, ಕಾರ್ಯಾಧ್ಯಕ್ಷ ಟಿ.ಎಸ್. ಮೋಹನ್‌ಕುಮಾರ್, ಮಹಾ ಪ್ರಧಾನ ಕಾರ್ಯದರ್ಶಿ ಟಿ.ಸಿ.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.