
ಕಲಬುರಗಿ,ಆ.7-ಚಿತ್ರಕಲಾವಿದೆ ಕಹ್ಕಶಾನ್ ನಾಜ್ನೀನ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಆಗಸ್ಟ್ 8 ಮತ್ತು 9 ರಂದು ನಗರದ ಕನ್ನಡ ಭವನದ ಕಲಾ ಸೌಧ ಕಲಾ ಗ್ಯಾಲರಿಯಲ್ಲಿ
ನಡೆಯಲಿದೆ.
ಈ ಪ್ರದರ್ಶನವನ್ನು ಬೆಂಗಳೂರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆರ್ಥಿಕ ಸಹಾಯದೊಂದಿಗೆ ಆಯೋಜಿಸಲಾಗಿದೆ. ಈ ಪ್ರದರ್ಶನವನ್ನು ಆಗಸ್ಟ್ 8ರಂದು ಸಂಜೆ 4.00 ಗಂಟೆಗೆ ಹಿರಿಯ ಕಲಾವಿದ ಬಸವರಾಜ ಆರ್. ಉಪ್ಪಿನ್ ಉದ್ಘಾಟಿಸಲಿದ್ದಾರೆ.
ಮಹಿಳಾ ಸಮಸ್ಯೆಗಳು ಹಾಗೂ ಕ್ಯಾಲಿಗ್ರಫಿ ಆಧಾರಿತ ಕಹ್ಕಶಾನ್ ನಾಜ್ನೀನ್ ಅವರ ಚಿತ್ರಕೃತಿಗಳು ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದ್ದು, ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತವೆ.































