
ಕಲಬುರಗಿ,ಆ.7-ಮನೆಯ ಬಾಗಿಲಿನ ಹತ್ತಿರದ ಕಿಟಕಿಯಿಂದ ಕೈ ಹಾಕಿ ಬಾಗಿಲಿನ ಕೊಂಡಿ ತೆರೆದು 45 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಆಭರಣ ಮತ್ತು 84,950 ರೂ.ಮೌಲ್ಯದ 1 ಕೆ.ಜಿ.628 ಗ್ರಾಂ.ಬೆಳ್ಳಿ ಆಭರಣ ಮತ್ತು ದೇವರ ವಿಗ್ರಹ ಸೇರಿ 1.29 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಗರದ ನೆಹರು ಗಂಜ್‍ನ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ.
ಆಶೀಶ್ ಗಿಲ್ಡಾ ಎಂಬುವವರ ಮನೆ ಬಾಗಿಲು ಕೊಂಡಿ ತೆರೆದು ಕಳ್ಳರು ಚಿನ್ನ, ಬೆಳ್ಳಿ ಆಭರಣ ಮತ್ತು ದೇವರ ವಿಗ್ರಹ ಕಳವು ಮಾಡಿದ್ದಾರೆ.
ಈ ಸಂಬಂಧ ಅವರು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.































