Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್‍ನಿಂದ ಮಾತ್ರ ಗ್ರಾಮೀಣ ಬ್ಯಾಂಕುಗಳು ಸದೃಢವಾಗಲು ಸಾಧ್ಯ : ಶಿವಕುಮಾರ ಬಗಲೂರ

ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್‍ನಿಂದ ಮಾತ್ರ ಗ್ರಾಮೀಣ ಬ್ಯಾಂಕುಗಳು ಸದೃಢವಾಗಲು ಸಾಧ್ಯ : ಶಿವಕುಮಾರ ಬಗಲೂರ

ಕಲಬುರಗಿ,ಆ.7-ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್‍ನಿಂದ ಮಾತ್ರ ಗ್ರಾಮೀಣ ಬ್ಯಾಂಕುಗಳು ಸದೃಢವಾಗಲು ಸಾಧ್ಯ ಎಂದು ಅಖಿಲ ಭಾರತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ ನೌಕರರ ಸಂಘ ಉಪಾಧ್ಯಕ್ಷ ಶಿವಕುಮಾರ ಬಗಲೂರ ಅವರು ತಿಳಿಸಿದ್ದಾರೆ.
ದೇಶದಲ್ಲಿ ಇರುವ 28 ಗ್ರಾಮೀಣ ಬ್ಯಾಂಕುಗಳು 2025-2026ರ ಸಾಲಿನಲ್ಲಿ ದಾಖಲೆಯ 10,177 ಕೋಟಿ ರೂ ನಿವ್ವಳ ಲಾಭ ಗಳಿಸಿವೆ. ಗ್ರಾಮೀಣ ಬ್ಯಾಂಕುಗಳ ಒಟ್ಟು ಠೇವಣಿ 7.68 ಲಕ್ಷ ಕೋಟಿ,
ಮುಂಗಡ ಸಾಲ 5.78 ಲಕ್ಷ ಕೋಟಿ, ಅನುತ್ಪಾದಕ ಸಾಲ 5.3% ಅಆ ಅನುಪಾತ 75.2% ಮತ್ತು ಅಖಂಖ 15% ಇದ್ದು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸರಿಸಾಟಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
2 ನೇಯ ಅಕ್ಟೋಬರ್ 1975 ರಂದು ಸ್ಥಾಪನೆಯಾದ ಗ್ರಾಮೀಣ ಬ್ಯಾಂಕುಗಳ ಉದ್ದೇಶ ಕೃಷಿ ಸಾಲ, ಹೈನುಗಾರಿಕೆ, ಸಣ್ಣ ವ್ಯಾಪಾರ ಸಾಲ ನೀಡುವುದರ ಮೂಲಕ ಗ್ರಾಮೀಣ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದವು. ಇಂದು ಗ್ರಾಮೀಣ ಬ್ಯಾಂಕುಗಳು ಹೆಮ್ಮರವಾಗಿ ಬೆಳೆದಿದ್ದು ಕೇವಲ ಸಾಮಾಜಿಕ ಯೋಜನೆಗಳಿಗೆ ಸೀಮಿತವಾಗಿರದೆ ಲಾಭದಾಯಕವಾಗಿ ಹೊರಹೊಮ್ಮುತ್ತಿದ್ದು, ಗ್ರಾಮೀಣ ಬ್ಯಾಂಕುಗಳಲ್ಲಿ ಸರಿಸುಮಾರು 1.25 ಲಕ್ಷ ನೌಕರರು ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಗ್ರಾಮೀಣ ಭಾಗದ ಜನರಿಗೆ ಕೃಷಿ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ, ಒSಒಇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಗ್ರಾಮೀಣಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಈ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಹಲವು ವರ್ಷಗಳ ಬೇಡಿಕೆಯಾದ 28 ಗ್ರಾಮೀಣ ಬ್ಯಾಂಕುಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ(ಓಖಃI) ಸ್ಥಾಪಿಸಿದ್ದಲ್ಲಿ ಗ್ರಾಮೀಣ ಬ್ಯಾಂಕುಗಳು ಬಲಿಷ್ಠವಾಗಿ ಹಾಗೂ ಸ್ವಾತಂತ್ರ್ಯವಾಗಿ ಇನ್ನೂ ಉತ್ತಮವಾಗಿ ವಿಕಸಿತ ಭಾರತದ ಆಶಯಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.