Home ಜಿಲ್ಲೆ ಕಲಬುರಗಿ ಹಣ್ಣು ಮತ್ತು ತರಕಾರಿ ಸಂಸ್ಕರಣೆ ಘಟಕ ಉದ್ಘಾಟನೆ

ಹಣ್ಣು ಮತ್ತು ತರಕಾರಿ ಸಂಸ್ಕರಣೆ ಘಟಕ ಉದ್ಘಾಟನೆ

ಕಲಬುರಗಿ,ಅ.2-ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕ ಅಥÀವಾ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನಾ ಕೇಂದ್ರದಿಂದ ಸ್ಥಳೀಯ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೊಯ್ಲೋತ್ತರ ನಷ್ಟವನ್ನು ತಡೆಯಲು ಸರಕಾರ ಕೈಗೊಂಡಿರುವ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ತೋಟಗಾರಿಕಾ ಬೆಳೆಗಳಾದ ಹಣ್ಣು, ತರಕಾರಿ ಹಾಗೂ ಸಾಂಬಾರು ಪದಾರ್ಥಗಳು ಬೇಗನೆ ಹಾಳಾಗುವದರಿಂದ, ಅವುಗಳನ್ನು ಸರಿಯಾದ ಸಮಯಕ್ಕೆ ಸಂಸ್ಕರಿಸಿದ ಮೌಲ್ಯವರ್ಧೀತ ಉತ್ಪನ್ನಗಳನ್ನಾಗಿ ಪರಿವರ್ತಿಸುವುದು ಇಂದಿನ ಅಗತ್ಯವಾಗಿದೆ ಎಂದು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಜಂಟಿ ಕೃಷಿ ನಿರ್ದೇಶಕರಾದ ದೀಪಾಜಾ ಹೇಳಿದರು.
ಕರ್ನಾಟಕ ಸರಕಾರದ ತೋಟಗಾರಿಕಾ ಇಲಾಖೆಯು ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಯೋಗ್ಯ ಬೆಲೆ ಪಡೆಯುವಂತೆ ಮಾಡಲು ಸರಕಾರಿ ಯೋಜನೆ ಅಡಿಯಲ್ಲಿ ಕಲಬುರ್ಗಿಯಲ್ಲಿ ಸ್ಥಾಪಿಸಿರುವ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕದÀ ಉದ್ಘಾಟನೆ ಹಾಗೂ ಲೋಕಾರ್ಪಣೆ ಮಾಡಿ ಅವರು ಮತಾನಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನೆ ನಿರ್ದೇಶಕ ಡಾ.ಪ್ರಭುರಾಜ, ಪಲ್ಸ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕರಾದ ಕವಿತಾ ಜಾದವ, ಸದಾಶಿವ, ಕೃಷಿ ಇಲಾಖೆ ಉಪ ನಿರ್ದೇಶಕಿ ಅನಸುಯಾ ಹೂಗಾರ, ಡಾ.ಮುನಿಸ್ವಾಮಿ, ಡಾ.ಬಿ.ಎಮ್ ದೊಡ್ಡಮನಿ, ಡಾ.ಬಿ.ವಿ.ಟೆಂಬುರ್ಣಿ, ಡಾ.ರಾಜು ತೆಗ್ಗಳ್ಳಿ, ಡಾ.ಆನಂದ ನಾಯ್ಕ, ಡಾ.ಅಂಬರೀಶ ಗಣಾಚಾರಿ, ಡಾ.ಸತೀಶ ಕಾಳೆ, ಡಾ.ಮಾಹಂತೆಶ ಜೋಗಿ, ರಮೇಶ ಮಹೇಂದ್ರಕರ, ಶರಣಗೌಡ ಪಾಟೀಲ, ಡಾ.ಶ್ರೀನಿವಾಸ, ಮಲ್ಕಣ್ಣ ಪಾಟೀಲ್, ಡಾ.ಯುಸಫ್ ಅಲಿ, ನಾಗಣ್ಣ, ಪರ್ಜಾನ ಎಮ್ ಕೋರಬು, ಮಲ್ಲಿಕಾರ್ಜುನ ಮೇಲಿನಕೆರಿ, ಪರಮಾನಂದ, ಪ್ರಭಾವತಿ, ಕುಮಾರಿ ಸೌಂದರ್ಯ ಹಾಗೂ ಇಲಾಖೆಯ ಆಧಿಕಾರಿಗಳು ಉಪಸ್ಥಿತರಿದ್ದರು.
ಈ ಮಹಾತ್ವಾಕಾಂಕ್ಷೆ ಯೋಜನೆಯ ಪ್ರಧಾನ ಅನ್ವೇಷಕರಾದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಪಿ ವಾಸುದೇವ ನಾಯ್ಕ, ರದ್ದೇವಾಡ್ಗಿ ಹಾಗೂ ಇನ್ನೋಂದು ಯೋಜನೆಯ ಪ್ರಧಾನ ಅನ್ವೇಷಕರಾದ ಡಾ.ಮಲ್ಲಿಕಾರ್ಜುನ ಕೆಂಗನಾಳ ರವರ ಸಸ್ಯ ಸಂಶೋಧನ ಕ್ಲಿನಿಕ್ ಉದ್ಘಾಟನೆ ನೇರೆವೆರಿತು. ಈ ಕಾರ್ಯಕ್ರಮದಲ್ಲಿ ಕೃಷಿ ಆವರಣದ ಎಲ್ಲಾ ವಿಜ್ಞಾನಿಗಳು ಸಿಬ್ಬಂದಿ ವರ್ಗದವರು, ಕಾರ್ಮಿಕ ವರ್ಗ ಮತ್ತು ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.