
ಕಲಬುರಗಿ,ಅ. 4: ಕರ್ನಾಟಕದಲ್ಲಿ ಎಸ್‍ಐಆರ್ ನಿಲ್ಲಿಸಿ – ಫಾರ್ಮ್ 7 ದುರುಪಯೋಗದ ಬಗ್ಗೆ ನಿಷ್ಪಕ್ಷಪಾತತನಿಖೆ ನಡೆಸುವಂತೆ ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಆರ್ ಕೆ ವೀರಭದ್ರಪ್ಪ ಆಗ್ರಹಿಸಿದ್ದಾರೆ.
ಅವೈಜ್ಞಾನಿಕ ಮತ್ತುಅಪ್ರಜಾತಾಂತ್ರಿಕಎಸ್ ಐ ಆರ್ ಪ್ರಕ್ರಿಯೆಯನ್ನು ಬಳಸಿಕೊಂಡು ಅರ್ಹ ಮತದಾರರನ್ನು ಅಳಿಸಿ ಹಾಕುವ ಪಿತೂರಿರಾಜ್ಯದಲ್ಲಿ ನಡೆದಿರುವುದು ಅತ್ಯಂತಆತಂಕಕಾರಿ ಬೆಳವಣಿಗೆಯಾಗಿದೆ.ಅನರ್ಹ ಮತ್ತು ಸಂಶಯಾಸ್ಪದ ಮತದಾರರನ್ನುತೆಗೆದುಹಾಕಲು ಅವಕಾಶ ನೀಡುವ ಫಾರ್ಮ್ 7ರ ಮೂಲಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ, ಅರ್ಹಮತದಾರರನ್ನುಗುರಿಯಾಗಿಸಲಾಗಿದೆ.ಮತದಾರರ ಮುದ್ರಿತ ವಿವರಗಳುಳ್ಳ ಫಾರ್ಮ್ 7ನ್ನು, ಸಾವಿರಾರು ಸಂಖ್ಯೆಯಲ್ಲಿ, ಅರ್ಜಿದಾರರಿಗೂ ಸರಿಯಾದ ಮಾಹಿತಿ ನೀಡದೆ ಬಿಜೆಪಿಯು ಸಲ್ಲಿಸಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಬಿಜೆಪಿ ಮತ್ತುಚುನಾವಣಾಆಯೋಗ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿವೆ ಎಂಬ ಆರೋಪಕ್ಕೆಇದು ಸಮರ್ಥನೆ ನೀಡುವಂತಿದೆ.ಈ ಹಿನ್ನೆಲೆಯಲ್ಲಿರಾಜ್ಯದಎಸ್‍ಐಆರ್ ಪ್ರಕ್ರಿಯೆಯನ್ನುತಕ್ಷಣವೇಅಮಾನತ್ತಿನಲ್ಲಿಡಬೇಕು, ಸಲ್ಲಿಕೆಯಾದ ಫಾರ್ಮ್ 7ರ ಕುರಿತುತನಿಖೆಯಾಗಬೇಕು ಮತ್ತುತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.























