Home ಜಿಲ್ಲೆ ಭಕ್ತ ಸಾಗರದ ನಡುವೆ ಜರುಗಿದ ಜಗದ್ಗುರು ಕೊಟ್ಟೂರೇಶ್ವರ ರಥೋತ್ಸವ

ಭಕ್ತ ಸಾಗರದ ನಡುವೆ ಜರುಗಿದ ಜಗದ್ಗುರು ಕೊಟ್ಟೂರೇಶ್ವರ ರಥೋತ್ಸವ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಅ.04: ನಗರದ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದಿಂದ ನಿನ್ನೆ ನಗರದ ಬ್ರೂಸ್ ಪೇಟೆ ಸರ್ಕಲ್ ನ ಬಸವಣ್ಣನ ದೇವಸ್ಥಾನದಿಂದ ಮಠದ ವರೆಗೆ ಹಮ್ಮಿಕೊಂಡಿದ್ದ ಜಗದ್ಗುರು ಕೊಟ್ಟೂರೇಶ್ವರ ರಥೋತ್ಸವ ಭಕ್ತ ಸಾಗರದ ನಡುವೆ ಸಾಗಿಬಂತು.

  ಕಾರಣಿಕ ಯುಗಪುರುಷ ಹಾನಗಲ್ಲ ಕುಮಾರ ಶಿವಯೋಗಿಗಳ 159ನೇ, ಕಾಯಕಯೋಗಿ ಡಾ. ಸಂಗನಬಸವ ಮಹಾಸ್ವಾಮಿಗಳವರ 88ನೇ ಜಯಂತ್ಯೋತ್ಸವದ ಅಂಗವಾಗಿ  ಕೊಟ್ಟೂರು ಸಂಸ್ಥಾನ ಮಠದ ಕೊಟ್ಟೂರು

ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಹಮ್ಮಿಕೊಂಡಿದ್ದ ರಥ ತೇರು ಬೀದಿ ಗಣೇಶಗುಡಿ ಮೂಲಕ ಮಠಕ್ಕೆ ಭಕ್ತರು ಎಳೆತಂದರು.

ನಂತರ ಮಠದ ಸಭಾಂಗಣದಲ್ಲಿ ಕಳೆದ ಹತ್ತು ದಿನಗಳಿಂದ ಹಮ್ಮಿಕೊಂಡಿದ್ದ “ಜೀವನದರ್ಶನ”ಪ್ರವಚನದ ಮಂಗಲ ಮಹೋತ್ಸವ ನಡೆಯಿತು.

ಇದಕ್ಕೂ ಮುನ್ನ ಕುರುಗೋಡು ತಾಲೂಕಿನ ಸೋಮಸಮುದ್ರ  ಮತ್ತು ಶ್ರೀಧರಗಡ್ಡೆಯಿಂದ ಬಳ್ಳಾರಿಯ ತಾಳೂರು ರಸ್ತೆ, ದುರ್ಗಮ್ಮ ದೇವಸ್ಥಾನ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ ಮೂಲಕ

 ಶ್ರೀಮಠದವರೆಗೆ  ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆಯ ಪಾದಯಾತ್ರೆ ವಿವಿಧ ಜನಪದ ಕಲಾ ತಂಡಗಳು,  ಗೊಂಬೆ ಕುಣಿತ ಮೊದಲಾದ  ಕಲಾ ತಂಡಗಳಿಂದ, ವಿವಿಧ ಮಠಾಧೀಸರು ವೀರಶೈವ ಲಿಂಗಾಯತ ಸಮಾಜದ ಮುಖಂಡರು ಸೇರಿದಂತೆ ಸಾವಿರಾರು ಭಕ್ತರ ಹೆಜ್ಹೆಯ ಮೂಲಕ ಸಾಗಿ ಬಂತು.