
ಮಾಲೂರು, ಅ.೧೪: ನಗರದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಶರಣ ನವರಾತ್ರಿ ಮಹೋತ್ಸವದ ಉದ್ಘಾಟನೆ ಹಾಗೂ ಸಮುದಾಯದ ಮಕ್ಕಳಿಗೆ ಲೇಖನ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಕೋಲಾರ ಪತ್ರಿಕೆ ಸಂಪಾದಕ ಕೆ.ವಿ. ಪ್ರಹ್ಲಾದ್ ರಾವ್ ಸವಿನೆನಪಿನಲ್ಲಿ, ಜಿಲ್ಲಾ ಉತ್ತಮ ಪತ್ರಕರ್ತ ಪ್ರಶಸ್ತಿ ಪಡೆದ ಪತ್ರಕರ್ತ ಎಸ್. ನಾರಾಯಣಸ್ವಾಮಿ ಅವರನ್ನು ಜ್ಯೋತಿನಗರ ವೈಶ್ಯ ಗಾಣಿಗ ಸಮಾಜದ ಶರಣ ನವರಾತ್ರಿ ಮಹೋತ್ಸವ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಎಸ್.ಎಂ. ರಮೇಶ್,ಸಮುದಾಯದ ಪತ್ರಕರ್ತ ಎಸ್. ನಾರಾಯಣಸ್ವಾಮಿ ಅವರು ಸಮಾಜದ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ್ದು, ಪತ್ರಿಕೋದ್ಯಮದಲ್ಲಿ ಸಮಾಜಮುಖಿಯಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಜ್ಯೋತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎನ್.ಜಿ. ಮಧುಸೂದನ್ ಮಾತನಾಡಿ,ನಮ್ಮ ಸಮಾಜದ ನಾರಾಯಣಸ್ವಾಮಿ ಅವರು ಪತ್ರಕರ್ತರಾಗಿ ಹಗಲಿರುಳು ಪತ್ರಿಕೆಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜ್ಯೋತಿನಗರ ವೈಶ್ಯ ಗಾಣಿಗ ಸಮಾಜದ ಶರನ ನವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಎಸ್. ನಾರಾಯಣಸ್ವಾಮಿ, ಖಜಾಂಚಿ ವಿ.ಎನ್. ಮೂರ್ತಿ, ಉಪಾಧ್ಯಕ್ಷರು, ಡಾ. ಮುನಿ ವೆಂಕಟಪ್ಪ, ತಿಮ್ಮಪ್ಪ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಶಬರೀಶ್ ಹಾಗೂ ಅಂಬರೀಶ್ ಹಾಜರಿದ್ದರು.

























