
ಚನ್ನಮ್ಮನ ಕಿತ್ತೂರು,ಅ.೪: ಪ್ರಧಾನಿಮೋದಿಜೀ ಜನ್ಮದಿನದ ಅಂಗವಾಗಿ ‘ಸೇವಾ ಸಂಕಲ್ಪ ಯಾತ್ರೆ’ ಅಭಿಯಾನದ ಮೂಲಕ ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಕಾರ್ಯಕರ್ತರು ಕೈಗೆತ್ತಿಕೊಳ್ಳಬೇಕೆಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸೇವಾ ಸಂಕಲ್ಪ ಅಭಿಯಾನದ ಹಿನ್ನೆಲೆ ಕಾದ್ರೋಳ್ಳಿ ಹಾಗೂ ಖೋದಾನಪೂರ ಜಿಪಂ ವ್ಯಾಪ್ತಿಯಲ್ಲಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದಿಂದ ಬೈಕ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ನಂತರ ರ‍್ಯಾಲಿ ಕಾದ್ರೋಳ್ಳಿ, ಹುಣಸೀಕಟ್ಟಿ, ತುರಮರಿ, ಖೋದಾನಪೂರ ಸೇರಿ ವಿವಿಧ ಗ್ರಾಮಗಳ ಮೂಲಕ ಚಿಕ್ಕನಂದಿಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತಲುಪಿತು. ರ‍್ಯಾಲಿಯಲ್ಲಿ ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಸಂದೀಪ ದೇಶಪಾಂಡೆ, ಬಸನಗೌಡ ಸಿದ್ರಾಮನಿ, ರಾಜೇಂದ್ರ (ಧನಿ) ಇನಾಮದಾರ, ಉಳವಪ್ಪ ಉಳ್ಳಾಗಡ್ಡಿ, ಬಸವರಾಜ ಮಾತನವರ, ಸಿದ್ದು ಬೋಳನ್ನವರ, ರಮೇಶ ಉಗರಖೋಡ, ದಿನೇಶ ಒಳಸಂಗ, ರವಿರಾಜ ಇನಾಮದಾರ, ಮಲ್ಲಿಕಾರ್ಜುನ ಕುಲಕರ್ಣಿ, ಶಂಕರ ಗುರುಪುತ್ರನವರ, ಈರಣ್ಣ ವಾರದ, ಅನಿ¯ದೇವ. ಎಸ್, ನೇಸರಗಿ ಸೇರಿದಂತೆ ಹಲವು ಮುಖಂಡರು ಪದಾಧಿಕಾರಿಗಳು, ಕಾರ್ಯಕರ್ತರು ಇತರರಿದ್ದರು.























