
ಕಲಬುರಗಿ,ಅ.3-ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದಿಂದ ಕನ್ನಡ ಪ್ರಾಧ್ಯಾಪಕರು ಮತ್ತು ಸಾಹಿತಿ ಡಾ.ಮೀನಾಕುಮಾರಿ ಪಾಟೀಲ ದಂಪತಿಗಳಿಗೆ ನಾಡೋಜ ಡಾ.ಗೀತಾ ನಾಗಭೂಷಣ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ, ಸಾಹಿತಿ ಡಾ.ಜಯದೇವಿ ಗಾಯಕವಾಡ, ಡಾ.ಸಿದ್ದಪ್ಪ ಹೊಸಮನಿ, ಡಾ.ಶೀಲಾದೇವಿ ಬಿರಾದಾರ, ಆಕಾಶ ತೆಗನೂರು ಇದ್ದರು.





















