
ಕಲಬುರಗಿ,ಅ.3-ನಗರದ ಎಂಎಸ್‍ಕೆ ಮಿಲ್ ಜಿಲಾನಾಬಾದ ರಾಮಚಕ್ಕಿ ಹತ್ತಿರದ ಸಾರ್ವಜನಿಕ ರಸ್ತೆ ಮೇಲೆ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆರ್.ಜಿ.ನಗರ ಪೊಲೀಸ್ ಠಾಣೆ ಎಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಮಲ್ಲನಗೌಡ, ಉಮೇಶ್, ಮಹಿಬೂಬ್, ಅರೇಶ, ಸಿದ್ದಣ್ಣಗೌಡ ಅವರು ದಾಳಿ ನಡೆಸಿ 11 ಜನ ಜೂಜುಕೋರರನ್ನು ಬಂಧಿಸಿದ್ದಾರೆ.
ಸಂತೋಷಕುಮಾರ ಸಿಂಗೆ, ಅರುಣ್ ಸಂತಪೂರ, ವಿನೋದ ಪಾಟೀಲ, ಅಕ್ಬರ್ ಇಸ್ಮಾಯಿಲ್ ಶೇಖ್, ಪವನ್, ಸುಬಾನ್ ಅನ್ಸಾರಿ, ನಿತೀನ್ ಹುಣಸೂರಕರ್, ಇಮ್ತಿಯಾಜ್ ಅಕ್ಬೂಲ್ ಶೇಖ್, ಅಜಿಮೋದ್ದಿನ್, ಇಮ್ರಾನ್ ಶೇಖ್ ಮತ್ತು ಫಿರೋಜ್ ಖಾನ್ ಎಂಬುವವರನ್ನು ಬಂಧಿಸಿ 31050 ರೂ.ನಗದು ಜಪ್ತಿ ಮಾಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















