Home ಮುಖಪುಟ ಸುದ್ದಿ ಪಾಕ್ ಜೊತೆ ನಂಟು ಆರೋಪಿ ಬಂಧನ

ಪಾಕ್ ಜೊತೆ ನಂಟು ಆರೋಪಿ ಬಂಧನ

ಬೆಂಗಳೂರು,ಆ.೨೨-ಪಾಕಿಸ್ತಾನದವರ ಜೊತೆ ಸಂಪರ್ಕ ಹೊಂದಿದ್ದ ಯುವಕನೊಬ್ಬನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.
ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ ( ೨೮ ) ಬಂಧಿತ ಆರೋಪಿಯಾಗಿದ್ದು,ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೇರೆಗೆ ಬಂಧಿಸಲಾಗಿದೆ.


ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳ ಜೊತೆ ಇನ್ಸಾಗ್ರಾಂ ಅಕೌಂಟ್ ಮೂಲಕ ಆರೋಪಿ ಸಂರ್ಪಕದಲ್ಲಿದ್ದು,ಪಾಕಿಸ್ತಾನದ ಶಾಜದ್ ಬುಟ್ಟಿ ನೆಟವರ್ಕ್ ಗ್ಯಾಂಗ್‌ನ ಇನ್ಸಾಗ್ರಾಂ ಅಕೌಂಟ್. ಗಣ್ಯ ವ್ಯಕ್ತಿಗಳು ದೊಡ್ಡ ದೊಡ್ಡ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಪಾಕಿಸ್ತಾನಿ ಗ್ಯಾಂಗ್ ಇದಾಗಿದೆ.


ಇನ್ಸ್‌ಸ್ಟಾಗ್ರಾಂನ ಪಾಕಿಸ್ತಾನ್ ಗ್ಯಾಂಗ್‌ನ ಅಕೌಂಟ್‌ನಲ್ಲಿ ಆರೋಪಿ ಸಂಪರ್ಕದಲ್ಲಿರುವುದು ಪತ್ತೆಯಾಗಿದ್ದನು.ತನ್ನ ಆಧಾರ್ ಕಾರ್ಡ್ ಎಲ್ಲ ಕೊಟ್ಟು ಅಕೌಂಟ್‌ಗೆ ಲಾಗಿನ್ ಆಗಿದ್ದ. ಕಳೆದ ೨ ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್‌ನ ಜೊತೆ ಇನ್ಸ್‌ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದನು.


ಆರೋಪಿಯು ಎಸಿ ರಿಪೇರಿ ಕೆಲಸ ಮಾಡುತ್ತಾ ಬೆಂಗಳೂರಿನ ಮಸೀದಿಯಲ್ಲಿ ಪಾಠ ಮಾಡುತ್ತಿದ್ದ. ಗ್ಯಾಂಗ್ ಹೇಳಿದಂತೆ ಕೇರಳ ಮತ್ತು ದೆಹಲಿಗೆ ಹೋಗಿ ಟ್ರೈನಿಂಗ್ ಸಹ ಪಡೆದುಕೊಂಡು ಬಂದಿದ್ದನು. ಆರೋಪಿಯ ವಿರುದ್ಧ ಬಿಎನ್‌ಎಸ್ ೧೧೩ (೩) ( ೧೯೭( ೨ ) ಅಡಿ ಪ್ರಕರಣ ದಾಖಲಾಗಿದೆ.