Home ಮುಖಪುಟ ಸುದ್ದಿ ಲಡಾಖ್‌ನಲ್ಲಿ ಜಮ್ಮು- ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ: ಅಮಿತ್ ಶಾ ಘೋಷಣೆ

ಲಡಾಖ್‌ನಲ್ಲಿ ಜಮ್ಮು- ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ಸಂಪುಟ ಅನುಮೋದನೆ: ಅಮಿತ್ ಶಾ ಘೋಷಣೆ

ನವದೆಹಲಿ: ಲಡಾಖ್ ಕೇಂದ್ರಾಡಳಿತ ಪ್ರದೇಶದ ಜನರಿಗೆ ಸುಲಭ ನ್ಯಾಯಾಂಗ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟವು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನೂತನ ಪೀಠವನ್ನು ಲಡಾಖ್‌ನಲ್ಲಿ ಸ್ಥಾಪಿಸಲು ಅನುಮೋದನೆ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಐತಿಹಾಸಿಕ ನಿರ್ಧಾರವನ್ನು ಗುರುವಾರ ಪ್ರಕಟಿಸಿದ್ದಾರೆ. ಈ ನಡೆಯಿಂದಾಗಿ ಲಡಾಖ್‌ನ ಅತ್ಯಂತ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರಿಗೆ ಕಾನೂನು ಸೇವೆಗಳು ಸುಲಭವಾಗಿ ಮತ್ತು ಶೀಘ್ರವಾಗಿ ದೊರೆಯಲಿವೆ. ಸದ್ಯ ಲಡಾಖ್ ಪ್ರದೇಶದ ಜನರು ನ್ಯಾಯಾಂಗ ಸೇವೆಗಳಿಗಾಗಿ ಜಮ್ಮು ಅಥವಾ ಶ್ರೀನಗರದಲ್ಲಿರುವ ಹೈಕೋರ್ಟ್ ಪೀಠಗಳಿಗೆ ಸುದೀರ್ಘ ಪ್ರಯಾಣ ಬೆಳೆಸಬೇಕಿತ್ತು.

ಈಗ ಲಡಾಖ್‌ನಲ್ಲೇ ಪೀಠ ಸ್ಥಾಪನೆಯಾಗುವುದರಿಂದ ಸಮಯ ಮತ್ತು ವೆಚ್ಚ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದ ಕುರಿತು ಸಾಮಾಜಿಕ ಜಾಲತಾಣ ’ಎಕ್ಸ್’ನಲ್ಲಿ (ಘಿ) ಮಾಹಿತಿ ಹಂಚಿಕೊಂಡ ಅಮಿತ್ ಶಾ, “ಲಡಾಖ್‌ನ ಸರ್ವಾಂಗೀಣ ಅಭಿವೃದ್ಧಿ ಹಾಗೂ ಅಲ್ಲಿನ ನಾಗರಿಕರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮೋದಿ ಸರ್ಕಾರ ಬದ್ಧವಾಗಿದೆ. ನೂತನ ಹೈಕೋರ್ಟ್ ಪೀಠವು ಸ್ಥಳೀಯರ ನ್ಯಾಯಾಂಗ ಪ್ರವೇಶದ ಹಕ್ಕನ್ನು ಮತ್ತಷ್ಟು ಬಲಪಡಿಸಲಿದೆ” ಎಂದು ತಿಳಿಸಿದ್ದಾರೆ.

೨೦೧೯ ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿದ್ದ ಲಡಾಖ್೨೦೧೯ರ ಅಕ್ಟೋಬರ್ ೩೧ ರಂದು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆಯ ನಂತರ ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಹೊರಹೊಮ್ಮಿತ್ತು. ಅಲ್ಲಿಯವರೆಗೆ ಇದ್ದ ಹೈಕೋರ್ಟ್ ಅನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎರಡೂ ಕೇಂದ್ರಾಡಳಿತ ಪ್ರದೇಶಗಳಿಗೆ ಜಂಟಿ ಹೈಕೋರ್ಟ್ ಆಗಿ ಮುಂದುವರಿಸಲಾಗಿತ್ತು. ಪ್ರಸ್ತುತ ಜಮ್ಮು ಮತ್ತು ಶ್ರೀನಗರದಲ್ಲಿ ಮಾತ್ರ ಹೈಕೋರ್ಟ್‌ನ ಮುಖ್ಯ ಪೀಠಗಳಿದ್ದು, ಇದೀಗ ಲಡಾಖ್‌ನಲ್ಲಿ ಮೂರನೇ ಪೀಠ ನಿರ್ಮಾಣವಾಗಲಿದೆ.

೯,೪೫೦ ಕೋಟಿ ವೆಚ್ಚದ ೪ ರೈಲ್ವೆ ಯೋಜನೆಗಳಿಗೆ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಒಪ್ಪಿಗೆಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಬುಧವಾರ ರೈಲ್ವೆ ಸಚಿವಾಲಯದ ?೯,೪೫೦ ಕೋಟಿ ಅಂದಾಜು ವೆಚ್ಚದ ನಾಲ್ಕು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿದೆ.