
ಕಲಬುರಗಿ,ಆ.22: ಇಲ್ಲಿನ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಋಗ್ವೇದಿಗಳ ಶ್ರಾವಣಿ ಹಾಗೂ ನೂತನ ಉಪಾಕರ್ಮವನ್ನು ಆಗಸ್ಟ್ 26 ಬುಧವಾರ ರಂದು ಬೆಳಿಗ್ಗೆ 7.30 ರಿಂದ ಹಮ್ಮಿಕೊಳ್ಳಲಾಗಿದೆ.
ನೂತನವಾಗಿ ಉಪನಯನವಾದ ವಟುಗಳಿಗೆ ನೂತನ ಉಪಾಕರ್ಮ ಮಾಡಿಸಲಾಗುವದು. ನಂತರ ಶ್ರಾವಣಿ, ಯಜ್ಞೋಪವೀತ ಧಾರಣೆ ಮಾಡಿಸಲಾಗುವದು. ಭಕ್ತರು ಸಮಯ ಸರಿಯಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಅರ್ಚಕರಾದ ಗುಂಡಾಚಾರ್ಯ ನರಿಬೋಳ ಅವರು ತಿಳಿಸಿದ್ದಾರೆ.































