
ಕಲಬುರಗಿ,ಆ 22: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಂಪ್ಯೂಟರ್ ವಿಜ್ಞಾನ ವಿಭಾಗದ ವತಿಯಿಂದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2026 ಜಾಗೃತಿ ಮತ್ತು ಓರಿಯಂಟೇಶನ್ ಕಾರ್ಯಾಗಾರವನ್ನು ನಡೆಯಿತು. ವಿಶ್ವವಿದ್ಯಾಲಯ ಮಟ್ಟದ ಆಂತರಿಕ ಹ್ಯಾಕಥಾನ್‍ಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ನಡೆದ ಕಾರ್ಯಾಗಾರದಲ್ಲಿ ಸಮಸ್ಯಾ ಹೇಳಿಕೆಗಳ ಆಯ್ಕೆ, ತಂಡ ರಚನೆ, ನವೀನ ಆಲೋಚನೆಗಳ ರೂಪಿಸುವಿಕೆ, ಪೆÇ್ರೀಟೋಟೈಪ್ ಅಭಿವೃದ್ಧಿ, ಪ್ರಸ್ತುತಿ ಸಿದ್ಧತೆ ಹಾಗೂ ಮೌಲ್ಯಮಾಪನ ಮಾನದಂಡಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ಯುವ ನಾವೀನ್ಯಕಾರರು ಕೇವಲ ಸಮಸ್ಯೆಗಳನ್ನು ಗುರುತಿಸುವುದಕ್ಕೆ ಸೀಮಿತವಾಗದೆ, ನೈಜ ಜೀವನದ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‍ನಂತಹ ವೇದಿಕೆಗಳ ಮೂಲಕ ತಮ್ಮ ಆಲೋಚನೆಗಳನ್ನು ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸಬೇಕು ಎಂದು ಕರೆ ನೀಡಿದರು. ಸಮಕಾಲೀನ ಸಾಮಾಜಿಕ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವಲ್ಲಿ ಬಹುಶಿಸ್ತೀಯ ಚಿಂತನೆ, ನಾವೀನ್ಯತೆ ಮತ್ತು ಸಹಯೋಗದ ಮಹತ್ವವನ್ನು ಅವರು ಒತ್ತಿಹೇಳಿದರು. ವಿಕಸಿತ ಭಾರತ @2047ರ ಗುರಿಗೆ ಅನುಗುಣವಾಗಿ ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಕ್ಷೇತ್ರಗಳಿಗೆ ಕೈಗೆಟುಕುವ ಹಾಗೂ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿ ತಿರುವನಂತಪುರಂನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯ ಪೆÇ್ರ. ಚಿನ್ಮಯ್ ಸಹಾ ಅವರು, ತಾಂತ್ರಿಕ ಪರಿಹಾರಗಳನ್ನು ರೂಪಿಸುವ ಮೊದಲು ಸಮಸ್ಯೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಸ್ಮಾರ್ಟ್ ಮೊಬಿಲಿಟಿ, ಸೆನ್ಸಿಂಗ್ ಮತ್ತು ಸಂವಹನ ತಂತ್ರಜ್ಞಾನಗಳು, ಗಿ2ಘಿ ವ್ಯವಸ್ಥೆಗಳು, ಕೃಷಿ, ಆರೋಗ್ಯ, ವಿಪತ್ತು ನಿರ್ವಹಣೆ, ಬಾಹ್ಯಾಕಾಶ ಅನ್ವಯಿಕೆಗಳು ಹಾಗೂ ಕಡಿಮೆ ವೆಚ್ಚದ ತಂತ್ರಜ್ಞಾನಗಳು ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳ ಕುರಿತು ಅವರು ಮಾಹಿತಿ ನೀಡಿದರು. ಇಂತಹ ನವೀನ ತಂತ್ರಜ್ಞಾನಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವ ಮೂಲಕ ಅರ್ಥಪೂರ್ಣ ಬದಲಾವಣೆ ತರಬಲ್ಲವು ಎಂದು ಹೇಳಿದರು.
ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು ಮಾತನಾಡಿ, ಯುವಶಕ್ತಿಯೇ ಭಾರತದ ಅಭಿವೃದ್ಧಿಯ ಪ್ರಮುಖ ಚಾಲಕಶಕ್ತಿ ಎಂದು ಹೇಳಿದರು. ಜ್ಞಾನವು ನಾವೀನ್ಯತೆ, ಕೌಶಲ್ಯ ಹಾಗೂ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಸಂಯೋಜಿತವಾದಾಗ ಮಾತ್ರ ಪರಿಣಾಮಕಾರಿ ಬದಲಾವಣೆ ಸಾಧ್ಯ ಎಂದು ತಿಳಿಸಿದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿಂತನೆಗಳನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ಕನಸುಗಳನ್ನು ಆಲೋಚನೆಗಳಾಗಿ, ಆಲೋಚನೆಗಳನ್ನು ಕಾರ್ಯರೂಪಕ್ಕೆ ತಂದು, ನಾವೀನ್ಯತೆ ಆಧಾರಿತ ರಾಷ್ಟ್ರ ನಿರ್ಮಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಎಸ್ ಐ ಎಚ್‍ವಿಶ್ವವಿದ್ಯಾಲಯ ಸಂಯೋಜಕ ಡಾ. ರೋಹಿತ್ ಕುಮಾರ್ ಬಿ. ಅವರು ಸ್ವಾಗತಿಸಿ, ಎಸ್ ಐ ಎಚ್2026ರ ಉದ್ದೇಶ, ರಚನೆ ಹಾಗೂ ವಿದ್ಯಾರ್ಥಿಗಳಿಗೆ ಲಭ್ಯವಿರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಬಹುಶಿಸ್ತೀಯವಾಗಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಪೆÇ್ರೀತ್ಸಾಹಿಸಿದರು.
“ವಿಕಸಿತ ಭಾರತ @2047ಕ್ಕಾಗಿ ತಂತ್ರಜ್ಞಾನ ಮತ್ತು ನಾವೀನ್ಯತೆ” ವಿಷಯದ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ಇಂಜಿನಿಯರಿಂಗ್ ಶಾಲೆಯ ಡೀನ್ ಪೆÇ್ರ. ಅಮರೇಂದ್ರ ಮತ್ಸ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ನಾಗರಾಜ್ ವಿ. ಧಾರವಾಡರ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಗುರುರಾಜ್ ಮುಕರಂಬಿ ಭಾಗವಹಿಸಿದ್ದರು. ಡಾ. ರೋಹಿತ್ ಕುಮಾರ್ ಬಿ. ಮತ್ತು ಡಾ. ನೃಸಿಂಹ ಚರಣ್ ಪ್ರಧಾನ್ ಚರ್ಚೆಯನ್ನು ನಿರ್ವಹಿಸಿದರು.
ಡ್ರೋನ್ ತಂತ್ರಜ್ಞಾನ, ಸಂವಹನ ವ್ಯವಸ್ಥೆಗಳು, ಮಾಹಿತಿ ಭದ್ರತೆ, ಆರೋಗ್ಯ ತಂತ್ರಜ್ಞಾನ, ಮೈಕ್ರೋವೇವ್ ತಂತ್ರಜ್ಞಾನ ಹಾಗೂ ಅಂತರಶಿಸ್ತೀಯ ನಾವೀನ್ಯತೆ ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳ ಕುರಿತು ಚರ್ಚಿಸಲಾಯಿತು. ಸೂಕ್ತ ತಾಂತ್ರಿಕ ಪರಿಹಾರವನ್ನು ಆಯ್ಕೆ ಮಾಡುವ ಮೊದಲು ನೈಜ ಸಮಸ್ಯೆಯನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ತಜ್ಞರು ಒತ್ತಿಹೇಳಿದರು.
ಡಾ. ಆಸ್ತಾ ಮತ್ತು ಡಾ. ಸುಶ್ರುತ ಅವರು ತಾಂತ್ರಿಕ ಓರಿಯಂಟೇಶನ್ ಅಧಿವೇಶನ ನಡೆಸಿ, SIಊ-2026ರ ಮಾರ್ಗಸೂಚಿಗಳು, PPಖಿ ಸಿದ್ಧತೆ, ಪೆÇ್ರೀಟೋಟೈಪ್ ಅಭಿವೃದ್ಧಿ ಹಾಗೂ ಪ್ರಮುಖ ಮೌಲ್ಯಮಾಪನ ಮಾನದಂಡಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ತಂಡ ರಚನೆ, ಕೋಡಿಂಗ್, ಸ್ಮಾರ್ಟ್ ಮೊಬಿಲಿಟಿ, ಸೆನ್ಸಿಂಗ್ ಮತ್ತು ಸಂವಹನ ತಂತ್ರಜ್ಞಾನಗಳು, ಕಡಿಮೆ ವೆಚ್ಚದ ನಾವೀನ್ಯತೆ ಹಾಗೂ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು. ಭರವಸೆಯ ಆಲೋಚನೆಗಳನ್ನು ವಿಸ್ತರಿಸಬಹುದಾದ ನಾವೀನ್ಯತೆಗಳು ಹಾಗೂ ಸ್ಟಾರ್ಟ್‍ಅಪ್‍ಗಳಾಗಿ ರೂಪಿಸುವಂತೆ ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸಲಾಯಿತು.
ಡಾ. ಆಸ್ತಾ ಅವರ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವು ವಂದೇ ಮಾತರಂ ಹಾಗೂ ವಿಧ್ಯುಕ್ತ ದೀಪ ಬೆಳಗಿಸುವಿಕೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.































