
ಕಮಲನಗರ,ಆ 22: ತಾಲೂಕಿನ ಹೊಳಸಮುದ್ರ ಗ್ರಾಮದಲ್ಲಿರುವ ಹಾವಗಿರಾವ ಬಸವರಾಜ ಸಿರಗೇರೆ ಎಂಬ ರೈತರ ಜಮೀನಿನಲ್ಲಿ ಕಿಡಿಗೇಡಿಗಳು ಚಿಕ್ಕ ಗಿಡಗಳನ್ನು ಕಡಿದು ಹಾಕಿದ್ದಾರೆ.ಇವರು ಹೋಳಸಮುದ್ರ ಗ್ರಾಮದ ನಿವಾಸಿಯಾಗಿರುತ್ತಾರೆ.
ಅವರ ಹೆಸರಿನಲ್ಲಿರುವ ಸರ್ವೆ ನಂ.15/*/5 ರ ಜಮೀನಿನಲ್ಲಿ ಒಟ್ಟು 7 ಎಕರೆ 10 ಜಮಿನಿನಲ್ಲಿ ಒಟ್ಟು ಮಾವಿನ ಮರಗಳು 12, ಮಹಾಗನಿ 10, ಹೆಜ್ಜೆವೂ ಮರ 65 ಹಚ್ಚಿದ್ದ ಚಿಕ್ಕ ಮರಗಳನ್ನು ಯಾರೋ ಕಿಡಿಗಳು ನಾಶ ಮಾಡಿದ್ದಾರೆ.
ಕಾಡು ಬೆಳೆಸಿ ನಾಡು ಉಳಿಸಿ ಎಂಬ ತತ್ವದಡಿಯಲ್ಲಿ ಮರವನ್ನ ಬೆಳೆಸುವಲ್ಲಿ ರೈತ ಮುಂದಾಗಿದ್ದಾಗ ಬೆಳೆದು ನಿಂತಿರುವ ಗಿಡಗಳು ರಾತ್ರೋರಾತ್ರಿಯಲ್ಲಿ ಗಿಡಗಳೆಲ್ಲ ನಾಶ ಮಾಡಿರುವುದು ದುಃಖಕರ ಸಂಗತಿ.
ಆ. 18 ರಂದು ರಾತ್ರಿ ಕೆಲವರು ಕಡಿದು ಹಾಕಿದ್ದಾರೆ.ಹೀಗೆ ಅಲ್ಲಿದ್ದ 3 ಪ್ರಕಾರದ ಜಾತಿಯ ಮರಗಳು ಸೇರಿದಂತೆ ಒಟ್ಟು ಸುಮಾರು 82 ಮರಗಳನ್ನು ಕಡಿದು ಹಾಕಿರುತ್ತಾರೆ ಅಲ್ಲದೆ ಬೇರೆ ಕಡೆ ಹಚ್ಚಲು ಇಟ್ಟಿದ್ದ 20 ಮರಗಳು ಕಟಾವು ಮಾಡಿ ಇಟ್ಟಿರುವ ಅವು ಸಹ ನಾಶ ಮಾಡಿರುತ್ತಾರೆ.
ಈ ಮಾಹಿತಿಯನ್ನು ಹೊಳಸಮದ ಗ್ರಾಮದ ಪಂಚಾಯತಿಗೆ ಹಾಗೂ ಕಮಲನಗರ್ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ತಾಲೂಕಿನ ಅಧಿಕಾರಿಗಳು ಹಾಗೂ ಕಮಲಗೆರೆ ಪೆÇಲೀಸ್ ಠಾಣೆಯ ಪಿಎಸ್‍ಐ ಆಸೆ ರಾತೋಡ್ ಪೆÇಲೀಸ್ ಸಿಬ್ಬಂದಿಯವರು ಪರಿಶೀಲನೆ ನಡೆಸಿದರು. ಮರಗಳನ್ನು ಕಡಿದಿರುವ ವ್ಯಕ್ತಿಗಳನ್ನು ಗುರುತಿಸಿ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕಡಿದ ಮರಗಳ ಮೌಲ್ಯವನ್ನು ಅಂದಾಜಿಸಿ ಉಂಟಾಗಿರುವ ನಷ್ಟಕ್ಕೆ ಪರಿಹಾರ ದೊರಕುವಂತೆ ದೂರನ್ನು ದಾಖಲಿಸಿದ್ದಾರೆ,
ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.































