ಕಲಬುರಗಿ: ಸರಕಾರಿ ಅತಿಥಿಗೃಹದ ಸಿಬ್ಬಂದಿ ದಲಿತ ಸಮುದಾಯದ ಮಹಾದೇವ ಕುಮಸಿಕರ್ ಎಂಬುವವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಂತ್ರಸ್ತ ವ್ಯಕ್ತಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಜನ ಜಾಗೃತಿ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಸಮಿತಿ ರಾಜ್ಯಾಧ್ಯಕ್ಷ ರುಕ್ಕಪ್ಪ ಕಾಂಬಳೆ,ಶಿವಶರಣ ಲಿಂಗದಳ್ಳಿ ನೇತೃತ್ವದಲ್ಲಿ ಅಮೀರಸಾಬ ನದಾಫ್,ಸುರೇಶ ವಾಡೇಕರ್ ಮತ್ತಿತÀರರು ಪಾಲ್ಗೊಂಡರು.