Home ಜಿಲ್ಲೆ ಬೆಂಗಳೂರು ಪಟ್ರೇನಹಳ್ಳಿ ಜಮೀನು ಪ್ರಕರಣ : ಸಮಗ್ರ ತನಿಖೆಗೆ ತ್ರಿಸದಸ್ಯರ ತಂಡ ರಚನೆ

ಪಟ್ರೇನಹಳ್ಳಿ ಜಮೀನು ಪ್ರಕರಣ : ಸಮಗ್ರ ತನಿಖೆಗೆ ತ್ರಿಸದಸ್ಯರ ತಂಡ ರಚನೆ

ಚಿಕ್ಕಬಳ್ಳಾಪುರ,ಸೆ.೪-ಚಿಕ್ಕಬಳ್ಳಾಪುರ ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು ೨೪ ಎಕರೆ ಜಮೀನಿಗೆ, ನಗರಸಭೆ ವ್ಯಾಪ್ತಿಗೆ ಸೇರದಿದ್ದರೂ ಚಿಕ್ಕಬಳ್ಳಾಪುರ ನಗರಸಭೆಯ ಆಸ್ತಿ ಸಂಖ್ಯೆ ೮೨೦/೭೫೫ ಎಂದು ನಮೂದಿಸಿ ಇ-ಖಾತೆ ಮಾಡಿರುವ ವಿಷಯವು ಮಾಧ್ಯಮಗಳ ವರದಿ ಹಾಗೂ ಮಾಜಿ ನಗರಸಭೆ ಸದಸ್ಯರ ದೂರು ಅರ್ಜಿಯ ಮೂಲಕ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂ-ಕಬಳಿಕೆ, ಕರ್ತವ್ಯ ಲೋಪ, ಅಧಿಕಾರ ದುರುಪಯೋಗ ಹಾಗೂ ನಿಯಮ ಉಲ್ಲಂಘನೆ ಸೇರಿದಂತೆ ಯಾವುದೇ ಅಕ್ರಮ ನಡೆದಿದೆಯೇ ಎಂಬುದನ್ನು ಸಮಗ್ರವಾಗಿ ಪರಿಶೀಲಿಸಲು ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಚಿಕ್ಕಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಆಯುಕ್ತರನ್ನು ಒಳಗೊಂಡ ತ್ರಿಸದಸ್ಯರ ತನಿಖಾ ತಂಡ ರಚಿಸಲಾಗಿದೆ.ಈ ತಂಡವು ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ ೨೪ ಗಂಟೆಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಜಮೀನಿನ ಪಹಣಿಯನ್ನು ಪರಿಶೀಲಿಸಿದಾಗ,೧೯೮೩-೮೪ರಿಂದ ೨೦೦೩ರವರೆಗೆ ‘ರೈಲ್ವೆ ಡಿಪೋ’ ಎಂಬುದಾಗಿ ನಮೂದಾಗಿರುವುದು ಕಂಡುಬಂದಿದ್ದು, ಸದರಿ ಆಸ್ತಿಯು ಚಿಕ್ಕಬಳ್ಳಾಪುರ ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪಹಣಿಯಲ್ಲಿ ನಮೂದಾಗಿರುವ ಜಮೀನಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ನಗರಸಭೆ ವ್ಯಾಪ್ತಿಗೆ ಒಳಪಡದ ಜಮೀನಿಗೆ ನಗರಸಭೆಯ ವಾರ್ಡ್ ಸಂಖ್ಯೆಯನ್ನು ಸೃಜಿಸಿ ಇ-ಖಾತೆ ಮಾಡಿರುವುದು ಗಂಭೀರ ಸ್ವರೂಪದ ಕರ್ತವ್ಯ ಲೋಪ ಹಾಗೂ ಅಧಿಕಾರ ದುರುಪಯೋಗವಾಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ, ಸಂಬಂಧಿತ ಸರ್ವೆ ನಂಬರ್ ವ್ಯಾಪ್ತಿಯ ಜಮೀನುಗಳಿಗೆ ನಗರಸಭೆಯಿಂದ ಇ-ಖಾತೆ ನೀಡಿರುವುದು ನಿಯಮ ಬಾಹಿರವಾಗಿರುವ ಕುರಿತು ತನಿಖಾ ತಂಡವು ಪರಿಶೀಲಿಸಲಿದೆ.

ಈ ಪ್ರಕರಣದಲ್ಲಿ ದಾಖಲೆಗಳ ಸೃಷ್ಟಿ, ಬದಲಾವಣೆ, ಅಧಿಕಾರ ವ್ಯಾಪ್ತಿಯ ಉಲ್ಲಂಘನೆ, ಕರ್ತವ್ಯ ಲೋಪ ಅಥವಾ ಇತರೆ ಯಾವುದೇ ಅಕ್ರಮ ಎಸಗಿರುವ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಅಥವಾ ಇತರೆ ಯಾವುದೇ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ತನಿಖೆಯ ಮೂಲಕ ಹೊರತರಲಾಗುವುದು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅವರು ಸ್ಪಷ್ಟಪಡಿಸಿದ್ದಾರೆ.