Home ಜಿಲ್ಲೆ ಬೆಂಗಳೂರು ತಾಲೂಕು ಆಡಳಿತದಿಂದ ಪ್ರಜಾಸೇವಾ ಆಂದೋಲನ

ತಾಲೂಕು ಆಡಳಿತದಿಂದ ಪ್ರಜಾಸೇವಾ ಆಂದೋಲನ

ಮಾಲೂರು.ಸೆ.೪- ವಿವಿಧ ಇಲಾಖೆಗಳು ಹಾಗೂ ಜನಸಾಮಾನ್ಯರಿಗೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಜಾಸೇವಾ ಆಂದೋಲನವನ್ನು ತಾಲೂಕು ಆಡಳಿತ ವತಿಯಿಂದ ಮಹಿಳೆಯರು ರೈತರು ಬಡವರ ಮನೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಎಂಬ ಶೀರ್ಷಿಕೆಯಡಿ ನಾಳೆ ಮಾಸ್ತಿಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಸಾರ್ವಜನಿಕರು ಆಹವಾಲುಗಳನ್ನು ಸಲ್ಲಿಸಿ ಸ್ಥಳದಲ್ಲಿ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.


ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರು ಮಹಿಳೆಯರು ಬಡವರ ಪರವಾಗಿ ಹೆಚ್ಚು ಕಾಳಜಿಯನ್ನು ಹೊಂದಿ ವಿವಿಧ ಸರ್ಕಾರಿ ಸಾರ್ವಜನಿಕ ಕೆಲಸಗಳಿಗಾಗಿ ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಅಳೆಯುವದನ್ನು ತಪ್ಪಿಸುವ ಸಲುವಾಗಿ ಪ್ರತ್ಯೇಕವಾಗಿ ಪ್ರಜಾ ಸೇವಾ ಸಚಿವಾಲಯವನ್ನು ತೆರೆದು ಮನೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ ಎಂದು ಪ್ರಜಾ ಸೇವೆ ಮಾಡುವ ಸಲುವಾಗಿ ಪ್ರತಿ ಶನಿವಾರ ತಾಲೂಕು ಆಡಳಿತ ವತಿಯಿಂದ ಹೋಬಳಿ ಕೇಂದ್ರಗಳಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.


ಮೊದಲ ಬಾರಿಗೆ ಮಾಸ್ತಿ ಗ್ರಾಮದ ಕೆಪಿಎಸ್‌ಶಾಲೆ ಆವರಣದಲ್ಲಿ ಸೆ.೫ಶನಿವಾರದಂದು ೧೦ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು,ಈ ಸಭೆಯಲ್ಲಿ ಎಲ್ಲಾ ಇಲಾಖೆ ಅಕಾರಿಗಳು ಭಾಗವಹಿಸಲಿದ್ದು,ಇಲಾಖೆಗಳಿಗೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಲಿಯುವುದನ್ನು ತಪ್ಪಿಸಿ ಸ್ಥಳದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು, ಪಹಣಿ, ವಸತಿ ಪಡಿತರ ಚೀಟಿ, ಕೆಎಸ್‌ಆರ್ಟಿಸಿ, ಕುಡಿಯುವ ನೀರು, ರಸ್ತೆ, ಅಂಗನವಾಡಿ ಸರ್ಕಾರಿ ಶಾಲೆಗಳು ಪೋಲಿಸ್ ಇಲಾಖೆ ಖಾಸಗಿ ಇಲಾಖೆ ೫ಗ್ಯಾರಂಟಿಗಳ ಯೋಜನೆಗಳ ಸಮಸ್ಯೆಗಳು ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.


ತಹಶೀಲ್ದಾರ್ ಎಂ.ವಿ. ರೂಪ ಮಾತನಾಡಿ,ಪ್ರಜಾ ಸೇವಾ ಆಂದೋಲನ ಸಭೆ ಸರ್ಕಾರ ದಿನ ಕನಸಿನ ಕೂಸಾಗಿದ್ದು ಈ ಕಾರ್ಯಕ್ರಮವು ಸೆ. ೫ ರಂದು ತಾಲೂಕು ಆಡಳಿತದ ವತಿಯಿಂದ ಮಾಸ್ತಿ ಗ್ರಾಮದಲ್ಲಿ ನಡೆಸಲಾಗುತ್ತಿದೆ ಪ್ರತಿ ನಾಲ್ಕನೇ ಶನಿವಾರ ಹೋಬಳಿ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಐಟಿಜಿಆರ್‌ಎಸ್ ಪೋರ್ಟಲ್ಲಿ ನೋಂದಾಯಿಸಿ ಸಿಕೃತಿ ನೀಡಲಾಗುವುದು ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು ಎಂದರು.


ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ವಿ.ಕೃಷ್ಣಪ್ಪ, ಮಾತನಾಡಿ ಸಾರ್ವಜನಿಕ ಸೇವೆಗಳು ಸವಲತ್ತುಗಳು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಜನರ ಸಮಸ್ಯೆಗಳು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ನಾಲ್ಕನೇ ಶನಿವಾರ ರಾಜ್ಯ ಸರ್ಕಾರವು ಪ್ರಜಾ ಸೇವಾ ಆಂದೋಲನ ಸಭೆಗಳನ್ನು ನಡೆಸಲು ಆದೇಶಿಸಿದ್ದು ಅದರಂತೆ ಹೋಬಳಿ ಕೇಂದ್ರದಲ್ಲಿ ನಡೆಯುವ ಸಭೆಯಲ್ಲಿ ಸಾರ್ವಜನಿಕರು ಸಲ್ಲಿಸುವ ಹವಾಲುಗಳನ್ನು ಐಟಿಜಿಆರ್‌ಎಸ್ ನಲ್ಲಿ ನೋಂದಾಯಿಸಿ ಸ್ವೀಕೃತಿ ನೀಡಲಾಗುವುದು ಎಂದರು.


ಈ ಸಂದರ್ಭದಲ್ಲಿ ಪೌರಾಯುಕ್ತ ಎಂ.ಎಸ್, ಮಹಾದೇವ್, ಯೋಜನಾ ಪ್ರಾಕಾರ ಅಧ್ಯಕ್ಷ ವಿಜಯನರಸಿಂಹ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಆಂಜಿನಪ್ಪ, ದರ್ಕಾಸ್ಥ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮುನೇಗೌಡ, ಎಡಿಎಲ್‌ಆರ್.ಕೃಷ್ಣ, ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪಗುತ್ತೇರ, ನಗರಸಭಾ ಮಾಜಿ ಸದಸ್ಯ ಮುರುಳಿಧರ್ ಇನ್ನಿತರರು ಹಾಜರಿದ್ದರು.