
ಮಾಲೂರು.ಸೆ.೪- ನಗರ ಸಭೆಯ ಕೆಲಸ ಕಾರ್ಯಗಳಿಗೆ ಸಂಚರಿಸಲು ಅನುಕೂಲಕ್ಕಾಗಿ ನಗರಸಭೆಯ ಸ್ವಂತ ಅನುದಾನದಿಂದ ಖರೀದಿಸಿರುವ ನೂತನ ಮಹೇಂದ್ರ ಬೊಲೆರೋ ಕಾರಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಪೂಜೆಸಲ್ಲಿಸಿ ಶಾಸಕ ಕೆ.ವೈ.ನಂಜೇಗೌಡ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಪೌರಾಯುಕ್ತರು ನಗರ ವೀಕ್ಷಣೆ ಹಾಗೂ ಸಭೆ ಸಮಾರಂಭಗಳಿಗೆ ಹೋಗುವುದಕ್ಕೆ ಬಾಡಿಗೆ ಕಾರನ್ನು ಬಳಸುತ್ತಿದ್ದರು.ಪ್ರಸ್ತುತ ನಗರ ಸಭೆಯು ಸ್ವಂತ ಅನುದಾನದಲ್ಲಿ ಟೆಂಡರ್ ಮೂಲಕ ಮಹೇಂದ್ರ ಬೊಲೆರೋ ಕಾರು ಖರೀದಿಸಿದ್ದು,ಪೌರಾಯುಕ್ತರು ಈ ವಾಹನವನ್ನು ನಗರದ ವೀಕ್ಷಣೆ ಸಭೆ ಸಮಾರಂಭಗಳಿಗೆ ಹೋಗಲು ಬಳಸಿಕೊಳ್ಳುವಂತೆ ಹೇಳಿದರು.
ನಗರದಲ್ಲಿ ಅಮೃತ್ ೨.೦ ಯೋಜನೆ ಅಡಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ನಗರದ ಹದಗೆಟ್ಟ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ವಿ.ರೂಪ, ತಾಪಂ.ಇಒವಿಕೃಷ್ಣಪ್ಪ, ಪೌರಾಯುಕ್ತ ಎಂ.ಎಸ್.ಮಹದೇವ್, ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪಗುತ್ತೇರ್, ಸರ್ಕಾರಿನೌಕರ ಸಂಘದ ಅಧ್ಯಕ್ಷ ಮುನೇಗೌಡ, ಹಾಜರಿದ್ದರು.
































