Home ಜಿಲ್ಲೆ ತುಮಕೂರು ದೊಡ್ಡ ಅಗ್ರಹಾರ, ಕಂಚಿಗನಹಳ್ಳಿ ಭಾಗಕ್ಕೆ ನೀರಾವರಿ: ಸುರೇಶ್‌ಬಾಬು

ದೊಡ್ಡ ಅಗ್ರಹಾರ, ಕಂಚಿಗನಹಳ್ಳಿ ಭಾಗಕ್ಕೆ ನೀರಾವರಿ: ಸುರೇಶ್‌ಬಾಬು

ಚಿಕ್ಕನಾಯಕನಹಳ್ಳಿ, ಸೆ. ೪- ದೊಡ್ಡ ಅಗ್ರಹಾರ, ಕಂಚಿಗನಹಳ್ಳಿ ಭಾಗದ ರೈತರ ಮನವಿಯಂತೆ ನೀರಾವರಿ ಯೋಜನೆಗಾಗಿ ಡಿಪಿಆರ್ ಸಿದ್ದಪಡಿಸಿ ನೀರಿನ ಹಂಚಿಕೆಯನ್ನು ಮಾಡಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.


ಪಟ್ಟಣದ ತೀನಂಶ್ರೀ ಭವನದ ಬಳಿ ಸಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ದೊಡ್ಡ ಅಗ್ರಹಾರ ಹಾಗೂ ಕಂಚಿಗನಹಳ್ಳಿ ಭಾಗದ ರೈತರು ನಮಗೆ ನೀರಾವರಿ ಯೋಜನೆಯಿಂದ ಅನ್ಯಾಯವಾಗಿದೆ ಎಂದು ಬೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಾಗಲೇ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬುಕ್ಕಾಪಟ್ಟಣ ಹೋಬಳಿಯ ದೊಡ್ಡಅಗ್ರಹಾರ ಹಾಗೂ ಕಂಚಿಗನಹಳ್ಳಿ ಭಾಗಕ್ಕೆ ಯಾವ ಯೋಜನೆಯಿಂದ ಯಾವ ಕಡೆಯಿಂದ ನೀರು ಹರಿಸಬಹುದು ಎಂಬುದರ ಬಗ್ಗೆ ಸ್ಥಳಕ್ಕೆ ಬೇಟಿ ನೀಡಿ ಇಂಜನಿಯರ್‌ಗಳು ಈ ಭಾಗದ ಜನರಿಗೆ ಅನ್ಯಾಯವಾಗದಂತೆ ಸರಿಯಾಗಿ ಡಿಪಿಆರ್ ಸಿದ್ದಪಡಿಸಿ ಸಲ್ಲಿಸುವಂತೆ ತಿಳಿಸಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಅಗ್ರಹಾರ ಕೆರೆಗೂ ನೀರಿನ ಹಂಚಿಕೆ ಮಾಡಿಸಲಾಗುವುದು. ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.


ದೊಡ್ಡಅಗ್ರಾಹಾರದ ನಾಗರಾಜು ಮಾತನಾಡಿ, ನಮ್ಮ ಗ್ರಾಮಗಳು ಶಿರಾದಿಂದಲೂ, ಚಿಕ್ಕನಾಯಕನಹಳ್ಳಿ ಕಡೆಯಿಂದಲೂ ಗಡಿ ಭಾಗದ ಗ್ರಾಮಗಳಾಗಿದ್ದು ಕಳ್ಳಂಬೆಳ್ಳದಲ್ಲಿ ಎತ್ತಿನ ಹೊಳೆ, ಭದ್ರಾ ಮೇಲ್ದಂಡೆ ಹಾಗೂ ಹೇಮಾವತಿ ನೀರಾವರಿ ಯೋಜನೆಗಳು ಬಂದಿದ್ದರು ನಮ್ಮ ಗ್ರಾಮದ ಕೆರೆಗೆ ಮಾತ್ರ ಯೋಜನೆ ರೂಪಿಸಿಲ್ಲ.


ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಕೆ.ಹೆಚ್.ಹನುಮಂತರಾಯಪ್ಪ, ವಿಶ್ವನಾಥ್, ಗಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.