
ಚಿಕ್ಕನಾಯಕನಹಳ್ಳಿ, ಜೂ. ೨- ತಾಲ್ಲೂಕಿನ ಶಕ್ತಿ ದೇವತೆಯೆನಿಸಿ ಅಪಾರ ಭಕ್ತ ವರ್ಗವನ್ನು ಹೊಂದಿರುವ ಶ್ರೀ ಮಲ್ಲಿಗೆರೆ ಕರಿಯಮ್ಮ ದೇವಿ ದೇವಾಲಯಕ್ಕೆ ಭಕ್ತರಿಂದ ನೂತನ ಬಸ್ ಸಮರ್ಪಣೆ ಮಾಡಲಾಯಿತು.
ತಾಲ್ಲೂಕಿನ ಹಂದಕೆರೆ ಹೋಬಳಿ ಮಲ್ಲಿಗೆರೆ ಗ್ರಾಮದೇವತೆ ಶಕ್ತಿದೇವತೆ ಶ್ರಿ ಮಲ್ಲಿಗೆರೆ ಕರಿಯಮ್ಮ ದೇವಾಲಯ ಹೆಸರಿಗೆ ತಕ್ಕ ಹಾಗೆ ಸಾವಿರಾರು ಭಕ್ತರ ಆರಾಧ್ಯ ದೈವವೆನಿಸಿ ಪ್ರಸಿದ್ದಿ ಹೊಂದಿದ್ದು ದಿನೇ ದಿನೇ ಭಕ್ತರನ್ನು ತನ್ನ ಪ್ರಭಾವಲಯಕ್ಕೆ ಸೆಳೆಯುತ್ತಲೇ ಇದೆ.
ಈ ದೇವರಿಗೆ ತಾಲ್ಲೂಕಿನ ಸೋರಲಮಾವು ಗ್ರಾಮದ ಕೀರ್ತಿಶೇಷ ಬಾಲಯ್ಯ ನಿಂಗಪ್ಪ ಹಾಗೂ ತಿಮ್ಮಕ್ಕ ಭಕ್ತರಾಗಿದ್ದು, ಅವರ ಸ್ಮರಣಾರ್ಥ ಅವರ ಮಕ್ಕಳಾದ ಕುಮಾರಸ್ವಾಮಿ, ಚಂದ್ರಕಲಾ ಕುಟುಂಬದಿಂದ ನೂತನ ಬಸ್‌ನ್ನು ದೇವಾಲಯಕ್ಕೆ ವಿದ್ಯುಕ್ತವಾಗಿ ಸಮರ್ಪಿಸಲಾಯಿತು.
ಇದರ ಅಂಗವಾಗಿ ಮೂಲ ದೇವರಿಗೆ ಅಭಿಷೇಕ ಹಾಗೂ ವಿಶೇಷ ಪೂಜಾಕಾರ್ಯಗಳು ನಡೆದು, ನಂತರ ದೇವರ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಅಪಾರ ಭಕ್ತರ ಸಮ್ಮುಖದಲ್ಲಿ ನಡೆಸಿ ನಂತರ ಅಲಂಕೃತ ಉತ್ಸವ ಮೂರ್ತಿಯನ್ನು ನೂತನ ಬಸ್‌ನಲ್ಲಿರಿಸಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ಹಸ್ತಾಂತರಿಸಲಾಯಿತು.
ಮಲ್ಲಿಗೆರೆ ಶ್ರೀಕರಿಯಮ್ಮ ದೇವಿಯು ಇತ್ತೀಚೆಗೆ ತನ್ನ ಪ್ರಭಾವವನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಪಸರಿಸಿದ್ದು, ಭಕ್ತರು ವಿವಿಧೆಡೆ ದೇವರನ್ನು ನಮ್ಮ ನೆಲೆಗಳಿಗೆ ಕೊಂಡೊಯ್ಯುತ್ತಾರೆ. ಇದಕ್ಕೆ ಸಹಾಯಕವಾಗಲಿ ಎಂಬ ಸದುದ್ದೇಶದಿಂದ ಭಕ್ತರು ನೂತನ ಬಸ್‌ನ್ನು ದೇವಾಲಯಕ್ಕೆ ಸಮರ್ಪಸಿದ್ದಾರೆ.


































