
ಬೀದರ್, 04: “ಪೆÇೀಷಕರ ಪಾಲನೆ, ಪೆÇೀಷಣೆ ಮತ್ತು ಸಂರಕ್ಷಣೆ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಬೇಕಿದೆ. ಅವಿಭಕ್ತ ಕುಟುಂಬಗಳಲ್ಲಿ ಪರಸ್ಪರ ಪ್ರೀತಿ, ಕಾಳಜಿ ಮತ್ತು ಭಾವನಾತ್ಮಕ ಬೆಂಬಲ ದೊರೆಯುತ್ತದೆ,” ಎಂದು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯೆ ಹೇಳಿದರು.
ಔರಾದ್ (ಬಿ) ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಹಿರಿಯ ನಾಗರಿಕರ ಮತ್ತು ವಿಶೇಷಚೇತನರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಹಿರಿಯ ನಾಗರಿಕರ ಮತ್ತು ವಿಶೇಷಚೇತನರ ಸೌಲಭ್ಯ ಶಿಬಿರ’ ಹಾಗೂ ‘ಒಂದು ದಿನದ ಅಂತರಪೀಳಿಗೆ ಬಾಂಧವ್ಯ ಮೇಳ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೀದರ್ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಸುಭಾಷ ರತ್ನ ಮಾತನಾಡಿ, “ಹಿರಿಯರ ಅನುಭವ, ಸಲಹೆ ಹಾಗೂ ಮಾರ್ಗದರ್ಶನವು ಯುವ ಪೀಳಿಗೆಗೆ ಬದುಕಿನ ದಿಕ್ಸೂಚಿಯಾಗಬೇಕು. ಯುವಕರು ಹಿರಿಯರ ಸಲಹೆ-ಸೂಚನೆಗಳನ್ನು ಪಡೆದು ಉತ್ತಮ ಸಂಸ್ಕಾರವಂತರಾಗಬೇಕು,” ಎಂದು ತಿಳಿಸಿದರು.
ಇದೇ ವೇಳೆ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಅವರು, “ಹಿರಿಯ ನಾಗರಿಕರ ಗುರುತಿನ ಚೀಟಿಯಿಂದ ವಿಮಾನ, ರೈಲ್ವೆ ಮತ್ತು ಬಸ್ ಪ್ರಯಾಣ ದರದಲ್ಲಿ ರಿಯಾಯಿತಿ, ಆದಾಯ ತೆರಿಗೆ ವಿನಾಯಿತಿ ಹಾಗೂ ಪೆÇೀಷಣಾ ಭತ್ಯೆ ಸೌಲಭ್ಯಗಳನ್ನು ಪಡೆಯಬಹುದು. ಜೊತೆಗೆ ವಿಕಲಚೇತನರಿಗಾಗಿ ಈಗಾಗಲೇ 14 ಯೋಜನೆಗಳ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದ್ದು, ಅರ್ಹರು ಅರ್ಜಿ ಸಲ್ಲಿಸಬೇಕು,” ಎಂದು ಕೋರಿದರು.
(ಖಖಿಔ)ಅಧಿಕಾರಿ ಜಾಫರ್ ಮಾತನಾಡಿ, ವಿಕಲಚೇತನರ ವಾಹನ ಚಾಲನಾ ಪರವಾನಗಿ ಪಡೆಯುವ ವಿಧಾನಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಗುಡಪಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (Pಆಔ) ಶ್ರೀಮತಿ ಸುರೇಖಾ, ಔರಾದ್ ತಾಲೂಕಿನ ಎಂ.ಆರ್.ಡಬ್ಲ್ಯೂ (ಒಖW) ಬಸವರಾಜ ದೇಶಮುಖ, ಗುಡಪಳ್ಳಿಯ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






















