
ಪ್ರಶಾಂತಿ ಕುಟೀರಕ್ಕೆ ೫೦ ವರ್ಷ
ಬೆಂಗಳೂರು, ನ.೧೩-ಕರ್ನಾಟಕವು ದಶಕಗಳಿಂದ ಯೋಗದ ಪ್ರಮುಖ ಕೇಂದ್ರವಾಗಿ ಗುರುತಿಸಿ ಕೊಂಡಿದೆ. ಯೋಗ ಕ್ಷೇತ್ರಕ್ಕೆ ಕನ್ನಡದ ವರನಟ ಡಾ. ರಾಜ್ಕುಮಾರ್ ನೀಡಿದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.
ಬೆಂಗಳೂರಿನ ಪ್ರಶಾಂತಿ ಕುಟೀರದಲ್ಲಿ ನಡೆದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ (ಎಸ್-ವ್ಯಾಸ) ೫೦ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ಮಾತನಾಡಿದ ಅವರು,
ಯೋಗಾಭ್ಯಾಸದ ಮೂಲಕ ಜನರಿಗೆ ಪ್ರೇರಣೆ ನೀಡಿದ ಡಾ. ರಾಜ್ಕುಮಾರ್ ಅವರ ಪಾತ್ರವನ್ನು ಮೋದಿ ವಿಶೇಷವಾಗಿ ಉಲ್ಲೇಖಿಸಿದ್ದು ವಿಶೇಷವೆನಿಸಿದೆ.
ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್ಕುಮಾರ್ ಅವರು ಯೋಗಾಭ್ಯಾಸದ ಮೂಲಕ ಜನರಿಗೆ ಪ್ರೇರಣೆಯಾಗಿದ್ದರು. ಯೋಗದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅವರ ಪಾತ್ರವನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಯೋಗದ ಮಹತ್ವ, ಭಾರತದ ಪ್ರಾಚೀನ ಪರಂಪರೆ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯೋಗದ ಪಾತ್ರವನ್ನು ವಿವರಿಸಿದರು.
ಯೋಗ ಇಂದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನಾದ್ಯಂತ ಜನರು ಯೋಗವನ್ನು ಜೀವನದ ಭಾಗವಾಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಮೂಲಕ ಭಾರತದ ಯೋಗ ಪರಂಪರೆಗೆ ಜಾಗತಿಕ ಮನ್ನಣೆ ದೊರೆತಿದೆ ಎಂಬ ಅಂಶವನ್ನು ಒತ್ತಿಹೇಳಿದರು.
೧೯೭೫ರಲ್ಲಿ ಆರಂಭವಾದ ಪ್ರಶಾಂತಿ ಕುಟೀರ ಐದು ದಶಕಗಳ ಪಯಣವನ್ನು ಪೂರ್ಣಗೊಳಿಸಿದೆ. ಆಧುನಿಕ ವಿಜ್ಞಾನ ಮತ್ತು ಭಾರತದ ಪ್ರಾಚೀನ ಆಧ್ಯಾತ್ಮಿಕ ಜ್ಞಾನವನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ ಎಂದರು.
ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯಕ್ಕೆ ಶೇಷಾದ್ರಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದರು. ದೇಶವು ಯಶಸ್ಸಿನ ಉನ್ನತ ಶಿಖರಕ್ಕೇರಬೇಕಾದರೆ ಸಮರ್ಪಣಾ ಮನೋಭಾವ, ಸಾಮರ್ಥ್ಯ ಮತ್ತು ಶಿಸ್ತನ್ನು ಹೊಂದಿರುವ ನಾಗರಿಕರ ಅಗತ್ಯವಿದೆ ಎಂಬುದನ್ನು ಶೇಷಾದ್ರಿ ಅವರು ಅರಿತಿದ್ದರು ಎಂದು ತಿಳಿಸಿದರು.
ಎಚ್.ವಿ. ಶೇಷಾದ್ರಿ ಅವರನ್ನು ನೆನಪಿಸಿಕೊಂಡಾಗ ಮೊದಲು ಮನಸ್ಸಿಗೆ ಬರುವುದು ಅವರ ಸರಳ ಸ್ವಭಾವ ಎಂದು ಪ್ರಧಾನಿ ಹೇಳಿದರು. ಉನ್ನತ ಸ್ಥಾನಮಾನ ಮತ್ತು ಅಪಾರ ಅನುಭವ ಹೊಂದಿದ್ದರೂ ಅವರ ನಡೆನುಡಿಯಲ್ಲಿ ವಿನಯ ಎದ್ದು ಕಾಣುತ್ತಿತ್ತು. ತಾವು ಹಿಂದೆಯಿದ್ದು, ಇತರರನ್ನು ಮುಂದೆ ತರುವುದರಲ್ಲಿ, ಜನರನ್ನು ಒಗ್ಗೂಡಿಸುವುದರಲ್ಲಿ ಹಾಗೂ ದೇಶ ಸೇವೆಗೆ ಅವರನ್ನು ಸಜ್ಜುಗೊಳಿಸುವುದರಲ್ಲಿ ಅವರು ನಂಬಿಕೆ ಹೊಂದಿದ್ದರು. ಇದು ಅವರ ಜೀವನದ ಕಾರ್ಯಚಟುವಟಿಕೆಗಳ ಪ್ರಮುಖ ಭಾಗವಾಗಿತ್ತು ಎಂದು ಸ್ಮರಿಸಿದರು.
ಮಗುವಿನ ಆರೈಕೆಗಾಗಿ ತಾಯಿ ಇಡೀ ರಾತ್ರಿ ನಿದ್ರಿಸದೆ ಮಗುವಿನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ. ಯಾವುದೇ ಸ್ವಾರ್ಥವಿಲ್ಲದೆ ಮಗುವಿಗಾಗಿ ಶ್ರಮಿಸುತ್ತಾಳೆ. ಇದೇ ಭಾವನೆಯನ್ನು ಸಮಾಜದ ಬಗೆಗೂ ವಿಸ್ತರಿಸಿದರೆ ಸಮಾಜಕ್ಕೆ ಅಪಾರ ಒಳಿತಾಗುತ್ತದೆ ಎಂಬ ಉದಾಹರಣೆಯನ್ನು ಶೇಷಾದ್ರಿ ಅವರು ಆಗಾಗ್ಗೆ ನೀಡುತ್ತಿದ್ದರು ಎಂದು ಮೋದಿ ಹೇಳಿದರು. ತಾಯಿಯಂತೆಯೇ ನಿಸ್ವಾರ್ಥ ಮನೋಭಾವದಿಂದ ಶೇಷಾದ್ರಿ ಅವರು ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ತಿಳಿಸಿದರು.
ಹೆಚ್.ವಿ. ಶೇಷಾದ್ರಿ ಅಸಾಧನೆಯನ್ನು ಮಾನೋತ್ಸವ ಯೋಗ ಕ್ಷೇತ್ರದಲ್ಲಿ ಶೇಷಾದ್ರಿಯವರು ಜಾಗತಿಕ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೆಚ್.ವಿ. ಶೇಷಾದ್ರಿಯವರು ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದರು. ಕರ್ನಾಟಕದಲ್ಲಿ ಆರ್ಎಸ್ಎಸ್ ಸಂಘಟನೆಯನ್ನು ಮುನ್ನಡೆಸಿದ್ದಲ್ಲದೆ, ದೇಶದ ವಿವಿಧ ರಾಜ್ಯಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಯೋಗ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಶೇಷಾದ್ರಿಯವರ ಸಾಧನೆಯನ್ನು ಇಂದಿಗೂ ಜನರು ಕೊಂಡಾಡುತ್ತಾರೆ ಎಂದು ಹೇಳಿದರು.
ಶೇಷಾದ್ರಿ ಅವರ ಒಂದು ಮಾತನ್ನು ಸ್ಮರಿಸಿದ ಮೋದಿ, “ನಾವು ಸಮಾಜಕ್ಕೆ ಎರಡೂ ಕೈಗಳಿಂದ ನೀಡಿದರೆ, ಸಮಾಜವು ಲಕ್ಷಾಂತರ ಕೈಗಳಿಂದ ನಮಗೆ ಮರಳಿಸುತ್ತದೆ” ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು ಎಂದರು. ತಮ್ಮ ಜೀವನದಲ್ಲಿ ಈ ಮಾತು ನಿಜವಾಗಿರುವುದನ್ನು ಹಲವು ಬಾರಿ ಕಂಡಿದ್ದೇನೆ. ಜನರ ಸೇವೆ ಮಾಡುವ ಸಂದರ್ಭದಲ್ಲಿ ಸದಾ ಅವರ ಆಶೀರ್ವಾದ ದೊರೆತಿದೆ. ಅದೇ ತಮ್ಮ ಬಹುದೊಡ್ಡ ಆಸ್ತಿಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಆರ್ ಎಸ್ ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಾತನಾಡಿ, ಯೋಗ ಕ್ಷೇತ್ರದಲ್ಲಿ ಶೇಷಾದ್ರಿಯವರು ಜಾಗತಿಕ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೆಚ್.ವಿ. ಶೇಷಾದ್ರಿಯವರು ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದರು. ಕರ್ನಾಟಕದಲ್ಲಿ ಆರ್ಎಸ್ಎಸ್ ಸಂಘಟನೆಯನ್ನು ಮುನ್ನಡೆಸಿದ್ದಲ್ಲದೆ, ದೇಶದ ವಿವಿಧ ರಾಜ್ಯಗಳಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಯೋಗ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಶೇಷಾದ್ರಿಯವರ ಸಾಧನೆಯನ್ನು ಇಂದಿಗೂ ಜನರು ಕೊಂಡಾಡುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಸುವರ್ಣ ಮಹೋತ್ಸವ ಆಡಳಿತ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ, ಕೇರಳದ ತಿರುವನಂತಪುರದಲ್ಲಿ ಎಸ್-ವ್ಯಾಸದ ಹೊಸ ಕ್ಯಾಂಪಸ್ ಆರಂಭಿಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈಸೂರು ಪೇಟ, ರೇಷ್ಮೆ ಶಾಲು ಹೊದಿಸಿ, ಸನ್ಮಾನಿಸಲಾಯಿತು. ವಿವೇಕಾನಂದ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಸುಧಾಯಾದವ್, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯ ಮುಖ್ಯಸ್ಥ ಡಾ. ನಾಗೇಂದ್ರ ಭಾಗವಹಿಸಿದ್ದರು.
























