Home ಕ್ರೀಡೆ ಅಭಿಷೇಕ್ ಸಿಡಿಲಬ್ಬರದ ಶತಕ:ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಒಲಿದ ಟಿ. 20 ಸರಣಿ

ಅಭಿಷೇಕ್ ಸಿಡಿಲಬ್ಬರದ ಶತಕ:ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಒಲಿದ ಟಿ. 20 ಸರಣಿ

ವೆಲ್ಲಿಂಗ್ಟನ್, ಅ.27-ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾರ ಬೌಂಡರಿ, ಸಿಕ್ಸರ್ ಗಳ ಸುರಿಮಳೆ, ಭರ್ಜರಿ ಶತಕ ಹಾಗೂ ವೈಭವ್ ಸೂರ್ಯವಂಶಿ ಮಿಂಚಿನ ಬ್ಯಾಟಿಂಗ್ ನೆರವಿನಿಂದ ವೆಲ್ಲಿಂಗ್ಟನ್ ನಲ್ಲಿಂದು ನ್ಯೂಜಿಲೆಂಡ್ ವಿರುದ್ಧ ಭಾರತ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.


ಈ ಗೆಲುವಿನೊಂದಿಗೆ ಟೀಂ ಇಂಡಿಯಾ 3-0. ಯಿಂದ ಟಿ.20 ಸರಣಿಯನ್ನು ಕೈವಶ ಮಾಡಿಕೊಂಡಿತು.


ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 198 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 4 ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 13.2 ಓವರ್​ಗಳಲ್ಲಿ ಅಂದರೆ ಇನ್ನು 40 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು.


ಅಭಿಷೇಕ್ ಶರ್ಮಾ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿದರೆ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದರು. ಈ ಇಬ್ಬರೂ ಕೇವಲ 43 ಎಸೆತಗಳಲ್ಲಿ 133 ರನ್‌ಗಳ ಜೊತೆಯಾಟವಾಡಿ ನ್ಯೂಜಿಲೆಂಡ್ ಬೌಲರ್‌ಗಳ ಧೂಳಿಪಟ ಮಾಬಾರಸತ
ಆರಂಭಿಕ ಆರು ಓವರ್‌ಗಳಲ್ಲೇ ಭಾರತ 100ರ ಗಡಿ ದಾಟುವಲ್ಲಿ ಯಶಸ್ವಿ ಆಯ್ತು. ಅಲ್ಲದೆ ಈ ಇಬ್ಬರು ಮೊದಲ ವಿಕೆಟ್​ಗೆ 133 ರನ್​ಗಳನ್ನು ಕಲೆಹಾಕಿ ಎದುರಾಳಿ ಪಾಳಯವನ್ನೇ ಬೆಚ್ಚಿಬೀಳಿಸಿತು. ಅಭಿಷೇಕ್​ ಶರ್ಮಾ 38 ಎಸೆತಗಳಲ್ಲಿ 113 ರನ್​ಗಳನ್ನು ಕೆಲೆಹಾಕಿದರೆ, ವೈಭವ್​ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್​ಗಳನ್ನು ಬಾರಿಸಿದರು. ಉಳಿದಂತೆ ಸಂಜು ಸ್ಯಾಮ್ಸನ್​ (18), ಅಯ್ಯರ್​ (5), ತಿಲಕ್​ (1) ಮತ್ತು ನಮನ್​ ಧೀರ್ (4) ರನ್​ಗಳನ್ನು ಕಲೆಹಾಕಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.


ಭಾರತ 13.2 ಓವರ್​ಗಳಲ್ಲೆ ಗುರಿಯನ್ನು ತಲುಪುವ ಮೂಲಕ ಇನ್ನು 40 ಎಸೆತಗಳು ಬಾಕಿ ಇರುವಾಗಲೇ ಜಯಭೇರಿ ಬಾರಿಸಿತು.


ಅಭಿಷೇಕ್ ಸ್ಪೋಟಕ ಬ್ಯಾಟಿಂಗ್​ ನಿಂದ 35 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಅವರ ಟಿ20 ಅಂತರಾಷ್ಟ್ರೀಯ ವೃತ್ತಿಜೀವನದ ನಾಲ್ಕನೇ ಶತಕವಾಗಿದೆ. ಆದಾಗ್ಯೂ, ಅವರು ಅತ್ಯಂತ ವೇಗದ ಶತಕದ ದಾಖಲೆಯನ್ನು ಮುರಿಯುವಲ್ಲಿ ವಿಫಲರಾದರು. ಈ ಹಿಂದೆ ಅವರು 30 ಎಸೆತಗಳಲ್ಲಿ ಶತಕ ಗಳಿಸಿದ್ದರು.


ಈ ಪಂದ್ಯದಲ್ಲಿ ಟಾಸ್​​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ನ್ಯೂಜಿಲೆಂಡ್​ ತಂಡ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 199 ರನ್​​ಗಳನ್ನು ಕಲೆಹಾಕಿತು.