ಕಲಬುರಗಿ: ವಾರ್ಡ್ ನಂ.48ರ ಜಯನಗರ, ಡಾಕ್ಟರ್ಸ್ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ತಲೆದೋರಿರುವ ಸಮಸ್ಯೆ ಬಗೆಹರಿಸಲು ಹಾಗೂ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡಲು ಆಗ್ರಹಿಸಿ ಶಾಶ್ವತ ಕುಡಿಯುವ ನೀರು ಪರಿಹಾರ ಹೋರಾಟ ಸಮಿತಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮುಂದೆ ಇಂದು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ, ಗೌರವಾಧ್ಯಕ್ಷ ಡಾ.ಕೆ.ಎಸ್.ವಾಲಿ, ಸಂಚಾಲಕ ಡಾ.ಕೆ.ಎಸ್.ಮುತ್ತಗಿ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಶಿವಾನಂದ ಹಾಗರಗಿ, ಡಾ.ಶಿವಕುಮಾರ ಚೇಂಗಟಿ, ವೀರೇಶ ದಂಡೋತಿ, ಸೂರ್ಯಕಾಂತ ಕೆ.ಬಿ.,ಶಾಂತಪ್ಪ ಮೇಳಕುಂದಿ, ಈರಣ್ಣಾ ಜಮಾದಾರ, ಬಂಡಪ್ಪ ಕೇಸೂರ, ನಾಗಪ್ಪ ಜೀವಣಗಿ, ಗುರುಶಾಂತಯ್ಯ ಶಾಸ್ತ್ರಿ ಸೇರಿದಂತೆ ಮತ್ತಿತರರು ಇದ್ದರು.