
ಕಲಬುರಗಿ,ನ.13-ಸಂಗೀತ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಬೆಳೆಸುತ್ತಾ ಬಂದಿದ್ದು, ಈ ಭಾಗದ ಕಲಾವಿದರ ಹಾಗೂ ಸಂಗೀತಾಭಿಮಾನಿಗಳ ಹಿತದೃಷ್ಟಿಯಿಂದ ಸಂಗೀತ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಇವತ್ತಿನ ಕಲಿಯುಗದಲ್ಲಿ ನಾವೆಲ್ಲ ಸಂಗೀತದ ಕಡೆಗೆ ಒಲವು ಕಡಿಮೆಯಾಗಿದೆ. ಆದರೆ ಸಂಗೀತದಲ್ಲಿರುವ ಶಕ್ತಿ ಮತ್ತೆ ಯಾವುದರಲ್ಲಿ ಇರುವುದಿಲ್ಲ. ಅದಕ್ಕೆ ಸಂಗೀತ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವೆಂದು ಸಿದ್ಧಾನಂದ ಶಿವಯೋಗಿಗಳು ಕರೆ ನೀಡಿದರು.
ನಗರದ ಗಂಜ್ ಬ್ಯಾಂಕ್ ಕಾಲೋನಿಯ ಈಶ್ವರ ದೇವಸ್ಥಾನ ಅವರಣದಲ್ಲಿ ದೇವಸ್ಥಾನದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಕೇಂದ್ರ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರುಣ್ ಕುಮಾರ್ ಹೆಚ್ ಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಶೋಕ ಸಿ ಮಾನಕರ, ವರ್ದಾಶಂಕರ ಆರ್ ಶೆಟ್ಟಿ, ಶರಣು ಬಿ ರೆಡ್ಡಿ, ಕವಿತಾ ವಿ ಪಾಟೀಲ್, ಸಿದ್ಧಾಂತ ಶಿಖಾಮಣಿ ಪ್ರವಚನ ವೇದಿಕೆ ಅಧ್ಯಕ್ಷರಾದ ರಾಜಶೇಖರ ಪಾಟೀಲ ಅಲ್ಲದೆ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಸಂಸ್ಕೃತಿ ಕಾರ್ಯಕ್ರಮದಲ್ಲಿ ಕುಮಾರಿ ನಾಗೇಶ್ರೀ ಹಾಗೂ ಕಲಾತಂಡವರಿಂದ ಜಾನಪದ ಗಾಯನ, ರಾಜಶೇಖರಯ್ಯಾ ಎಸ್ ಮಠಪತಿ ಹಾಗೂ ಕಲಾತಂಡವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮ ಕೇಳಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತಾಸಕ್ತರು, ಕಲಾವಿದರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಚನ್ನಮಲ್ಲಯ್ಯ ಸ್ವಾಮಿ, ರಾಜಶೇಖರ್ ಬೊಮ್ಮನಹಳ್ಳಿ, ರವೀಂದ್ರ ಜಮದರಖಾನಿ, ಶಿವರಾಯ ಮುಲಗೆ, ಶ್ರೀಶೈಲ್ ಬಿರಾದಾರ, ಶಿವಾನಂದ ಹಿತ್ತಲಸಿರೂರ, ಗುರು ಶಾಂತಯ್ಯ, ವೀರಭದ್ರಯ್ಯ, ಪವಿತ್ರಾ ವೀರಯ್ಯಸ್ವಾಮಿ, ಅಂಬಾರಾಯ ಕೋಣೆ, ಅಂಬಿಕಾ ಎಸ್ ಬಿಂಗೆ, ನಿರ್ಮಲಾ ಅ ಕೋಣೆ ಅಲ್ಲದೆ ಸಮಸ್ತ ಬಡಾವಣೆಯ ಸದ್ಭಕ್ತರು, ಗಣ್ಯಮಾನ್ಯ ವ್ಯಕ್ತಿಗಳು, ಈಶ್ವರ ದೇವಸ್ಥಾನದ ಭಜನಾ ಮಂಡಳಿ ಸದ್ಭಕ್ತರು ಉಪಸ್ಥಿತರಿದ್ದರು.





















